ಇಂದು ಆಸ್ಟ್ರೇಲಿಯಾ V/S ಇಂಗ್ಲೆಂಡ್ ಮುಖಾಮುಖಿ
ಬರ್ಮಿಂಗ್ ಹ್ಯಾಮ್ : ಸಾಂಪ್ರದಾಯಿಕ ಎದುರಾಳಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿಕ್ರಿಕೆಟ್ ಟೂರ್ನಿಯ ಎ ಗುಂಪಿನ ತಮ್ಮ ಅಂತಿಮ ಪಂದ್ಯದಲ್ಲಿ ಇವತ್ತು ಮುಖಾಮುಖಿಯಾಗಲಿವೆ.
ಈಗಾಗ್ಲೇ ಎರಡು ಪಂದ್ಯಗಳಲ್ಲಿ ಗೆದ್ದಿರುವ ಇಂಗ್ಲೆಂಡ್ ಈಗಾಗಲೇ ನಾಲ್ಕರ ಘಟಕ್ಕೆ ಲಗ್ಗೆ ಇಟ್ಟಿದ್ದು, ಅಂತಿಮ ಪಂದ್ಯದಲ್ಲೂ ಎದುರಾಳಿಗಳನ್ನು ಹಣಿದು ಅಜೇಯವಾಗಿ ಗುಂಪು ಹಂತದ ಹೋರಾಟ ಮುಗಿಸುವ ಲೆಕ್ಕಾಚಾರದಲ್ಲಿದೆ.
ಇನ್ನು ಎರಡು ಆಸ್ಟ್ರೇಲಿಯಾ ತಂಡ ಆಡಿರುವ ಎರಡೂ ಪಂದ್ಯಗಳು ಮಳೆ ಯಿಂದ ರದ್ದಾಗಿವೆ. ಡೇವಿಡ್ ವಾರ್ನರ್ ಆ್ಯರನ್ ಫಿಂಚ್ ಹಾಗೂ ನಾಯಕ ಸ್ಮಿತ್ ಅವರು ಅಗ್ರ ಕ್ರಮಾಂಕದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ಬೌಲಿಂಗ್ ನಲ್ಲಿ ಆಸ್ಟ್ರೇಲಿಯಾ ಶಕ್ತಿಯುತವಾಗಿದೆ. ಮಿಷೆಲ್ ಸ್ಟಾರ್ಕ್ , ಜೋಶ್ ಹ್ಯಾಜಲ್ ವುಡ್ ಹಾಗೂ ಕಮಿನ್ಸ್ ಕೂಡ ರನ್ ನಿಯಂತ್ರಿಸುವ ಜತೆಗೆ ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.
ಕ್ರಿಕೆಟ್ ಲೋಕದ ಬಲಿಷ್ಟ ತಂಡಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಹೋರಾಟಕ್ಕೆ ಎಜ್ ಬಾಸ್ಟನ್ ಅಂಗಳ ವೇದಿಕೆ ಸಿದ್ದಗೊಂಡಿದ್ದು, ಸೆಮಿಫೈನಲ್ ಪ್ರವೇಶಿಸುವ ಕನಸು ಹೊತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಈ ಹಣಾಹಣಿ ಮಹತ್ವದೆನಿಸಿಕೊಂಡಿದೆ.
Comments