ಶ್ರೀಲಂಕಾ ಅತ್ಯುತ್ತಮ ಆಟವಾಡಿದೆ ಎಂದ ಕೊಹ್ಲಿ
ಲಂಡನ್: ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಪಂದ್ಯದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಸೋತಿದೆ. ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿ ಜಯದ ನಿರೀಕ್ಷೆಯಲ್ಲಿದ್ದ ಭಾರತದ ನಿರೀಕ್ಷೆ ಹುಸಿ ಮಾಡಿದ ಶ್ರೀಲಂಕಾ ಆಟಗಾರರು 48.4. ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ ಜಯದ ನಗೆ ಬೀರಿದರು.
ಶ್ರೀಲಂಕಾ ಹಾಗೂ ನಮ್ಮ ತಂಡದ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು, ನಮಗೆ 321 ಸ್ಕೋರ್ ದೊರೆತ ಬಳಿಕ ನಾವೇ ಗೆಲುವು ಸಾಧಿಸಲಿದೆ ಎಂದು ನಿರೀಕ್ಷೆ ಹೆಚ್ಚಿತ್ತು. ನಮ್ಮ ತಂಡವು ನೀಡಿದ ಅತ್ಯುತ್ತಮ ಪ್ರದರ್ಶನ ಬಳಿಕವು ಶ್ರೀಲಂಕಾ ನಮ್ಮ ಗೆಲವು ಕಿತ್ತುಕೊಂಡಿತು, ಆದ್ರೆ ಶ್ರೀಲಂಕಾ ಅತ್ಯುತ್ತಮ ಆಟವಾಡಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ನಾವು ಅತಿ ಹೆಚ್ಚು ರನ್ ಗಳಿಸಿದ್ದೇವೆ ಎಂದು ಅಂದುಕೊಂಡಿದ್ದೇವು. ನಮ್ಮ ತಂಡದ ಬೌಲರ್ಸಗಳ ಮೇಲೆ ನಂಬಿಕೆ ಇತ್ತು. ಆದರೆ ಶ್ರೀಲಂಕಾ ಚೆನ್ನಾಗಿ ಆಟವಾಡಿದೆ ಎಂದು ಶ್ಲಾಘಿಸಿದರು.
Comments