ಪಾಕ್ ಸೋಲು ದುಃಖ ತಂದಿದೆ- ಇಮ್ರಾನ್ ಖಾನ್
ಚಾಂಪಿಯನ್ಸ್ ಟ್ರೋಫಿ ೨೦೧೭ ಕ್ರಿಕೆಟ್ ನಲ್ಲಿ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿರುವುದರ ಬಗ್ಗೆ ಮಾಜಿ ಆಟಗಾರ ಇಮ್ರಾನ್ ಖಾನ್ ದುಃಖ ವ್ಯಕ್ತಪಡಿಸಿದ್ದಾರೆ.
ಪಾಕ್ ವಿರುದ್ಧ ೧೨೪ ರನ್ ಗಳ ಬೃಹತ್ ಅಂತರದ ಗೆಲುವಿನೊಂದಿಗೆ ಭಾರತ ಜಯ ಗಳಿಸಿದ್ದು, ಪಾಕ್ ಪರವಾಗಿ ನನಗೆ ತುಂಬಾ ಬೇಸರವಾಗಿದೆ ಎಂದು ಇಮ್ರಾನ್ ಖಾನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಕ್ರಿಕೆಟ್ ಜಗತ್ತಿಗೆ ಗುಡ್ ಬೈ ಹೇಳಿದ ಬಳಿಕ ಇಮ್ರಾನ್ ಖಾನ್ ರಾಜಕಾರಣಕ್ಕೆ ಎಂಟ್ರಿ ನೀಡಿದ್ದರು. ಇರ್ಮಾನ್ ಖಾನ್ ತಮ್ಮ ಟ್ವಿಟರ್ ನಲ್ಲಿ ಈ ರೀತಿ ಹೇಳಿದ್ದಾರೆ. ‘’ ಗೆಲುವು ಹಾಗೂ ಸೋಲು ಎಂಬುದು ಆಟದ ಭಾಗವಾಗಿದೆ. ಆದ್ರೆ ಹೋರಾಟ ಮಾಡದೆ ಗೆಲುವು ಸಾಧಿಸಿರುವ ಭಾರತ, ಪಾಕಿಸ್ತಾನ ಸೋಲಪ್ಪಿಕೊಂಡಿರುವುದರ ಬಗ್ಗೆ ಅತೀವ ನೋವು ತಂದಿದೆ’’ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ನಾಯಕತ್ವ ಹೊಂದಿದ್ದ ವೇಳೆ ವಿಶ್ವ ಕಪ್ ಪಡೆದುಕೊಂಡಿರುವುವಲ್ಲಿ ಇರ್ಮಾನ್ ಖಾನ್ ಮಹತ್ವದ ಪಾತ್ರ ವಹಿಸಿದ್ದರು.
ಈ ಹಿಂದಿನ ಇತಿಹಾಸ ನೋಡಿದಾಗ ಐಸಿಸಿ ಆಯೋಜಿಸಿರುವ ಎಲ್ಲಾ ಟೂರ್ನಿಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ವಿಶ್ವಕಪ್ ಟೂರ್ನಿಗಳಲ್ಲಿ, ೨೦೧೪ರ ಏಷ್ಯಾಕಪ್, ೨೦೧೩ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಜಯ ಗಳಿಸಿದ್ದ ಭಾರತ ಮತ್ತೆ ತನ್ನ ಈ ಗೆಲುವನ್ನು ಮುಂದುವರಿಸಿದೆ.
Comments