ಗೆಲುವಿನ ನಾಗಾಲೋಟ ಮುಂದುವರಿಸಿದ ಭಾರತ

ಬರ್ಮಿಂಗ್ ಹ್ಯಾಮ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನಲ್ಲಿ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ. ಪಾಕ್ ವಿರುದ್ಧ ೧೨೪ ರನ್ ಗಳ ಬೃಹತ್ ಅಂತರದ ಗೆಲುವಿನೊಂದಿಗೆ ಮತ್ತೊಂದು ದಾಖಲೆ ಬರೆದಿದೆ.
೨೦೧೩ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ಕ್ರೀಡಾಂಗಣದಲ್ಲಿ ಭಾರತ್- ಪಾಕ್ ಮುಖಾಮುಖಿಯಾಗಿದ್ದವು. ಆ ವೇಳೆ ಭಾರತ ಜಯಗಳಿಸಿತ್ತು. ಇದರ ಜತೆಗೆ ಈ ಹಿಂದಿನ ಇತಿಹಾಸ ನೋಡಿದಾಗ ಐಸಿಸಿ ಆಯೋಜಿಸಿರುವ ಎಲ್ಲಾ ಟೂರ್ನಿಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ವಿಶ್ವಕಪ್ ಟೂರ್ನಿಗಳಲ್ಲಿ, ೨೦೧೪ರ ಏಷ್ಯಾಕಪ್, ೨೦೧೩ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಜಯ ಗಳಿಸಿದ್ದ ಭಾರತ ಮತ್ತೆ ತನ್ನ ಈ ಗೆಲುವನ್ನು ಮುಂದುವರಿಸಿದೆ.
ಭಾನುವಾರ ನಡೆದ ಬಿ ಗುಂಪಿನ ಪಂದ್ಯಕ್ಕೆ ಹಲವು ಬಾರಿ ಮಳೆರಾಯನ ಅಡ್ಡಿಯಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಭಾರತ ೪೮ ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೩೧೯ರನ್ ಗಳಿಸಿತು.
ಉಮೇಶ್ ಯಾದವ್ ೩, ಪಾಂಡ್ಯ, ಜಡೇಜಾ ತಲಾ ೨ ಮತ್ತು ಭುವನೇಶ್ವರ್ ಕುಮಾರ್ ೧ ವಿಕೆಟ್ ಪಡೆದರು. ಇದಕ್ಕೂ ಮುನ್ನ ಭಾರತ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಜೇಯ ೮೧ ಹಾಗೂ ಮಾಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಯುವರಾಜ್ ಸಿಂಗ್ ೫೩ ಅವರ ಸ್ಫೋಟಕ ಬ್ಯಾಟ್ಸಮನ್ ಗಳ ನೆರವಿನಿಂದ ತಂಡ ೪೮ ಓವರ್ ಗಳಲ್ಲಿ ೩೧೯ ರನ್ ದಾಖಲಿಸಿತು.
ಇದರ ಮಧ್ಯೆ ೯೧ ರನ್ ಗಳಿಸಿದ ರೋಹಿತ್ ರನೌಟ ಆಗಿ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ ಜತೆ ಸೇರಿಕೊಂಡ ಯುವರಾಜ್ ಸಿಂಗ್ ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕ್ಯಾಪ್ಟನ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಕೊನೆ ಕೆಲ ಓವರ್ ಗಳಲ್ಲಿ ತಂಡಕ್ಕೆ ಸ್ಫೋಟಕ ಪ್ರದರ್ಶನ ನೀಡುವುದರ ಜತೆಗೆ ಪಾಕ್ ಬೌಲರ್ ಗಳನ್ನು ಹಿಗ್ಗಾ ಮುಗ್ಗಾ ದಂಡಿಸಿದರು.
Comments