ಕೋಚ್ ಹುದ್ದೆ ಮೇಲೆ ‘ವಿರೇಂದ್ರ ಸೆಹ್ವಾಗ್ ’ ಕಣ್ಣು ?
ನವದೆಹಲಿ: ಇಂಡಿಯಾದ ಕ್ರಿಕೆಟ್ ತಂಡಕ್ಕಾಗಿ ಕೋಚ್ ಹುಡುಕಾಟ ಆರಂಭವಾಗಿದೆ. ಚಾಂಪಿಯನ್ಸ್ ಟ್ರೋಫಿ ಆದ್ಮೇಲೆ ಇಂಡಿಯಾ ಕ್ರಿಕೆಟ್ ಟೀಮ್ ಗೆ ಹೊಸ ಕೋಚ್ ಸೀಗುತ್ತಾರೆ ಎಂದು ಹೇಳಲಾಗುತ್ತಿತ್ತು. ಇದರ ಮಧ್ಯೆ, ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮೆನ್ ಆಗಿದ್ದ ವಿರೇಂದ್ರ ಸೆಹ್ವಾಗ್ ಅರ್ಜಿ ಸಲ್ಲಿಸಿದ್ದಾರೆ.
ಇದಲ್ಲದೇ ಭಾರತ ತಂಡದ ಮಾಜಿ ಹಾಗೂ ಹಿರಿಯ ಆಟಗಾರರು ಇಂಡಿಯಾ ಕೋಚ್ ಸ್ಥಾನಕ್ಕಾಗಿ ಅರ್ಜಿ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
- ವಿರೇಂದ್ರ ಸ್ವೆಹಾಗ್
ಭಾರತ ಕ್ರಿಕೆಟ್ ಟೀಮ್ ಗೆ ಕೋಚ್ ಆಗಲು ಮೊದಲನೇಯ ಸ್ಥಾನದಲ್ಲಿದ್ದಾರೆ ಸೆಹ್ವಾಗ, ಹುದ್ದೆ ಮೇಲೆ ವಿರೇಂದ್ರ ಸೆಹ್ವಾಗ ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೆಹ್ವಾಗ ಕೋಚ್ ಆಗಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.
- ಟಾಮ್ ಮೂಡಿ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಶ್ರೀಲಂಕಾ ಕೋಚ್ ಆಗಿದ್ದವರು.
- ಲಾಲ್ ಚಂದ ರಜಪೂತ್
ಪೂರ್ವ ಕ್ರಿಕೆಟ್ ಆಟಗಾರ ಲಾಲ್ ಚಂದ ರಜಪೂತ್ ಟೀಮ್ ಇಂಡಿಯಾದ ಕೋಚ್ ಆಗಿದ್ದವರು. ತಂಡದಲ್ಲಿ ನೀಡಿದ್ದ ಕೊಡುಗೆಗಾಗಿ ಹೆಸರುವಾಸಿಗಿದ್ದರು
- ರಿಚರ್ಡ್ ಫೈಬಸ್
ಇಂಗ್ಲೆಂಡ್ ನಲ್ಲಿ ಜನಿಸಿರುವ ರಿಚರ್ಡ್ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಕೋಚ್ ಆಗಿದ್ದವರು. ಸದ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನ ಡೈರೆಕ್ಟರ್ ಆಗಿದ್ದಾರೆ.
- ದೊಡ್ಡ ಗಣೇಶ್
ಭಾರತದ ಪರವಾಗಿ ಗಣೇಶ್ ೪ ಟೆಸ್ಟ್ ಮತ್ತು ಭಾರತದ ಪರ ಏಕದಿನ ಆಟವಾಡಿದ್ದಾರೆ.
Comments