ಇಂದು ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮುಖಾಮುಖಿ
ಬರ್ಮಿಂಗ್ ಹ್ಯಾಮ್ : ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಇಂದು ಲಂಡನ್ ನ ಬರ್ಮಿಂಗ್ ಹ್ಯಾಮ್ ಮೈದಾನದಲ್ಲಿ ಎರಡು ತಂಡಗಳು ಸೆಣಸಲಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ತಂಡ ೨೧ ಪಂದ್ಯಗಳನ್ನಾಡಿದ್ದು, ೧೨ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ೮ ಪಂದ್ಯಗಳಲ್ಲಿ ಸೋತಿದೆ. ಅದೇ ರೀತಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಆಡಿರುವ ೨೧ ಪಂದ್ಯಗಳಲ್ಲಿ ೧೨ ಪಂದ್ಯಗಳಲ್ಲಿ ಗೆದ್ದು ೭ ಪಂದ್ಯಗಳಲ್ಲಿ ಸೋತಿದೆ.
ಬಿ ಗ್ರೂಪಿನ ಮೊದಲ ಪಂದ್ಯ ಗೆಲ್ಲುವ ನಿರೀಕ್ಷೆಯ ಜತೆಗೆ ಅಸೀಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೆನ್ ವಿಲಿಯಮ್ಸ್ ಮೈದಾನಕ್ಕಿಳಲಿದ್ದಾರೆ. ಉಭಯ ತಂಡಗಳಲ್ಲಿ ಯಾವುದೇ ಸಮಯದಲ್ಲಿ ಪಂದ್ಯದ ಗತಿ ಬದಲು ಮಾಡುವ ಘಟಾನುಘಟಿಗಳಿರುವ ಕಾರಣ ಪಂದ್ಯ ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ.
Comments