ಚಾಂಪಿಯನ್ಸ್ ಟ್ರೋಫಿ: ಹಣಾ ಹಣಿಗೆ ಸಿಧ್ಧತೆ
ಲಂಡನ್ : ವಿಶ್ವದ ಎಂಟು ಕ್ರಿಕೆಟ್ ತಂಡಗಳು ಈಗಾಗಲೇ ಆರಂಭಿಕ ಚಾಂಪಿಯನ್ಸ್ ಟ್ರೋಫಿ ಆಡಲು ಸಜ್ಜಾಗಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಲಿವೆ.
ಇವತ್ತು ಮಧ್ಯಾಹ್ನ ೩ ಗಂಟೆಗೆ ಲಂಡನ್ ನಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ನಡೆಯಲಿದೆಯ ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಬಾಂಗ್ಲಾದೇಶ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಉತ್ಸಾಹದಲ್ಲಿದೆ.
ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಎಲ್ಲಾ ತಂಡಗಳು ಹೋರಾಟ ನಡೆಸಲಿವೆ. ಅತಿಥೇಯ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಬಾಂಗ್ಲಾ, ಶ್ರೀಲಂಕಾ ತಂಡಗಳು ಕಣದಲ್ಲಿವೆ.
ಲೀಗ್ ಹಂತದಲ್ಲಿ ೧೨ ಪಂದ್ಯಗಳು, ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯಗಳು ನಡೆಯಲಿದ್ದು, ಜೂನ್ ೧ರಿಂದ ಆರಂಭವಾಗಿ ೧೮ರವರೆಗೂ ಪಂದ್ಯಾವಳಿ ನಡೆಯಲಿವೆ.
Comments