ಕೋಚ್ ಕುಂಬ್ಳೆ ಪರ ಆಡಳಿತ ಸಮಿತಿ ಒಲವು; 2019ರ ವಿಶ್ವಕಪ್ವರೆಗೂ ಮುಂದುವರಿಕೆ ಸಾಧ್ಯತೆ
ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಪರ ತಂಡದ ಆಟಗಾರರಲ್ಲಿ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಇದೀಗ ಆಡಳಿತ ಮಂಡಳಿಯಿಂದ ಕುಂಬ್ಳೆ ಪರ ಒಲವು ಮೂಡಿದ್ದು 2019ರವರೆಗೂ ಕುಂಬ್ಳೆ ಕೋಚ್ ಆಗಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಹಾಗೂ ಬಿಸಿಸಿಐ ಪದಾಧಿಕಾರಿಗಳ ಪೈಕಿ ಹಲವರು ಕುಂಬ್ಳೆ ಗುತ್ತಿಗೆ ಅವಧಿಯನ್ನು ವಿಸ್ತರಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಂಬ್ಳೆ ಅತ್ಯುತ್ತಮ ಕೆಲಸ ಮಾಡಿಯೂ ಅವರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಬಿಸಿಸಿಐ ಒತ್ತಾಯದಿಂದಾಗಿ ಆಡಳಿತ ಸಮಿತಿ ಕೋಚ್ ಹುದ್ದೆಗೆ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಅಂತಿಮಗೊಂಡ ಸದಸ್ಯರ ಸಂದರ್ಶನ ನಡೆಸಲಿದೆ. ಕುಂಬ್ಳೆಗೂ ಸಹ ಸಂದರ್ಶನ ನೀಡುವಂತೆ ಸಲಹಾ ಸಮಿತಿ ಸೂಚಿಸಿತ್ತದೆಯೋ ಇಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಒಂದೊಮ್ಮೆ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಿದ್ದಲ್ಲಿ ಏವರು ತಪ್ಪದೇ ಹಾಜರಾಗಲಿದ್ದಾರೆ.
Comments