ಇಂಡೋ-ಪಾಕ್ ಕ್ರಿಕೆಟ್ ಸರಣಿಗೆ ಅವಕಾಶವಿಲ್ಲ
ನವ ದೆಹಲಿ: ಪ್ರಸ್ತುತ ಇಂಗ್ಲೆಂಡ್ ನಲ್ಲಿ ಆಯೋಜಿಸಲಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವೆ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿ ಜೂನ್ 4 ರಂದು ನಡೆಯುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದ್ರೆ ಇದಕ್ಕೂ ಮೊದಲು ಬಿಸಿಸಿಐಗೆ ಪ್ರಶ್ನೆ ಮಾಡಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೊಯಲ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಎಲ್ಲಿಯವರೆಗೂ ಭಯೋತ್ಪಾದನಾ ಕೃತ್ಯಗಳನ್ನು ನಿಲ್ಲಿಸದ ಹೊರೆತು ಇಂಡೋ-ಪಾಕ್ ನಡುವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಅವಕಾಶವಿಲ್ಲ ಎಂದಿದ್ದಾರೆ.ದುಬೈನಲ್ಲಿ ಉಭಯ ದೇಶಗಳ ನಡುವಿನ ಸರಣಿ ಬಗ್ಗೆ ಸಭೆ ನಡೆಸಲು ಮುಂದಾದ ಬಿಸಿಸಿಐ ವಿರುದ್ಧ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಸಿದ್ದು, ಸಭೆ ನಡೆಸಲು ಮುಂದಾದ ಬಿಸಿಸಿಐ ವಿರುದ್ಧ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೊಯೆಲ್ ಹರಿಹಾಯ್ದಿದ್ದಾರೆ.
ಪಾಕ್ ಆಟಗಾರರು ಭಾರತಕ್ಕೆ ಪ್ರವೇಶಿಸುವಂತಿಲ್ಲ, ಈ ನಿಟ್ಟಿನಲ್ಲಿ ತಟಸ್ಥ ಸ್ಥಳದಲ್ಲಿ ಸರಣಿ ಆಯೋಜಿಸುವ ಬಗ್ಗೆ ಮಾತುಕತೆ ನಡೆಸಲು ಬಿಸಿಸಿಐ ಮತ್ತು ಪಿಸಿಬಿ ಇಂದು ಸಭೆ ಸೇರುವುದಿತ್ತು. ಆದ್ರೆ ಸಭೆ ನಡೆಸುವುದಕ್ಕೂ ಮುನ್ನ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಬೇಕಿತ್ತು 'ಭಯೋತ್ಪಾದನೆ ಮತ್ತು ಕ್ರೀಡೆ ಒಂದೇ ಹಾದಿಯಲ್ಲಿ ಸಾಗದು'. 'ಕೇಂದ್ರದ ಜತೆ ಚರ್ಚಿಸದೇ ಬಿಸಿಸಿಐ ಪಾಕ್ ಜತೆ ಆಡುವ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ' ಎಂದು ಸಚಿವರು ಹೇಳಿದ್ದಾರೆ.
Comments