ರೇಷನ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ..!!

20 May 2019 3:41 PM | Recipes
1441 Report

ರೇಷನ್ ಕಾರ್ಡ್ ಹೊಂದಿರುವವರಿಗೆ ಇದೀಗ ಸರ್ಕಾರ ಮಾಡಿರುವ ಈ ಹೊಸ ನಿಯಮ ಅನುಸರಿಸುವಂತೆ ಎಲ್ಲರಿಗೂ ತಿಳಿಸಿದೆ.. ರೇಷನ್ ಕಾರ್ಡ್ ಗೆ ಯಾರು ಅರ್ಹರು ಎಂಬುದನ್ನು ಕಂಡು ಹಿಡಿಯುವುದಕ್ಕೆ ಈ ನಿಯಮವನ್ನು ಅನುಸರಿಸುತ್ತಿದೆ.. ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಇದೇ ಮೊದಲ ಬಾರಿಗೆ ಇ-ಕೆವೈಸಿ ವಿಧಾನವನ್ನು ಅನುಸರಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ..

ಮುಂದಿನ ತಿಂಗಳು ಜೂನ್‌ 1ರಿಂದ ಇ-ಕೆವೈಸಿ ಪ್ರಾರಂಭವಾಗಲಿದ್ದು, ಇ-ಕೆವೈಸಿ ಸಲುವಾಗಿ ಪಡಿತರ ಪಟ್ಟಿಯಲ್ಲಿ ಸದ್ಯಸರೆಲ್ಲರೂ ರೇಷನ್‌ ಅಂಗಡಿಗೆ ಹೋಗಿ ತಮ್ಮ ಹೆಬ್ಬೆಟ್ಟಿನ ಗುರುತು ನೀಡಬೇಕಾಗಿರುತ್ತದೆ... ಇನ್ನು ಇ-ಕೆವೈಸಿ ಅಪ್‌ಡೆಟ್‌ ವ್ಯವಸ್ಥೆಯು ಒಂದು ಬಾರಿ ಮಾತ್ರ ನಡೆಯಲಿದ್ದು, ಎಲ್ಲ ಸದ್ಯಸರು ಪ್ರತಿ ತಿಂಗಳು ಕುಟುಂಬದ ಯಾವುದೇ ಒಬ್ಬ ಸದ್ಯಸ ಒಂದು ಪಡಿತರ ಪಡೆಯಬಹುದಾಗಿದೆ. ಅಷ್ಟೆ ಅಲ್ಲದೆ ಇನ್ನು ವೃದ್ದರು, ಕುಷ್ಟರೋಗಿಳು, ವಿಶೇಷಚೇತನರು, ಎಂಡೋಸಲ್ಛಾನ್‌ ಪೀಡಿತರಿಗೆ ಇ-ಕೆವೈಸಿ ಅಪ್‌ಡೇಟ್‌ ನಿಂದ ವಿನಾಯತಿ ನೀಡಲಾಗಿದೆ. ಇಂತಹವರ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆಹಾರ ನಿರೀಕ್ಷಕರಿಗೆ ಇಲಾಖೆ ಹೇಳಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸರ್ಕಾರ ಮಾಡಿರುವ ಈ ಯೋಜನೆಯಿಂದಾಗಿ ಎಲ್ಲರಿಗೂ ಕೂಡ ಉಪಯೋಗವಾಗಲಿದೆ

Edited By

Manjula M

Reported By

Manjula M

Comments