ಬಾಳೆಹಣ್ಣಿನ ಇಡ್ಲಿ ಮಾಡೋದ್ ಹೇಗೆ ಅಂತೀರಾ..? ಇಲ್ಲಿದೆ ನೋಡಿ ಇಡ್ಲಿ ಮಾಡುವ ವಿಧಾನ

ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಏನ್ ತಿಂಡಿ ಮಾಡೋದು ಅಂತಾನೆ ಯೋಚನೆ ಮಾಡೊದಕ್ಕೆ ರಾತ್ರಿಯಿಂದಲೆ ಶುರು ಮಾಡಿಕೊಳ್ಳುತ್ತೇವೆ. ದಿನ ಒಂದೆ ರೀತಿಯ ತಿಂಡಿ ತಿಂದು ಎಲ್ಲರಿಗೂ ಬೋರ್ ಆಗಿರುತ್ತದೆ. ಸ್ವಲ್ಪ ಢಿಪರೆಂಟಾಗಿ ಏನಾದ್ರೂ ಟ್ರೈ ಮಾಡಬೇಕು ಅನ್ಕೊಳೋರು ಬಾಳೆಹಣ್ಣಿನ ಇಡ್ಲಿಯನ್ನು ಟ್ರೈ ಮಾಡಿ.
ಬಾಳೆಹಣ್ಣಿನ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು :
- ಕಪ್ ರವೆ
- ರುಬ್ಬಿದ ತೆಂಗಿನಕಾಯಿ
- 3-4 ಹಿಸುಕಿದ ಬಾಳೆಹಣ್ಣು
- ಸಕ್ಕರೆ
- ರುಚಿಗೆ ತಕ್ಕಷ್ಟು ಉಪ್ಪು
- ಬೇಕಿಂಗ್ ಸೋಡಾ
- ತುಪ್ಪ
ಬಾಳೆಹಣ್ಣಿನ ಇಡ್ಲಿ ಮಾಡುವ ವಿಧಾನ :
ಬಾಳೆ ಹಣ್ಣುನ್ನು ಚೆನ್ನಾಗಿ ಕಲಸಿ ನಂತರ ರವೆ, ತೆಂಗಿನಕಾಯಿ ತುರಿ, ಸಕ್ಕರೆ , ಉಪ್ಪು ಮತ್ತು ಬೇಕಿಂಗ್ ಸೋಡಾ ಸೇರಿಸಿ.ಇಡ್ಲಿ ಪಾತ್ರೆಗೆ ತುಪ್ಪ ಹಚ್ಚಿ ನಂತರ ಹಿಟ್ಟನ್ನು ಹಾಕಿ, ನಾರ್ಮಲ್ ಇಡ್ಲಿಯಂತೆ ಬೇಯಿಸಿದರೆ ರುಚಿರುಚಿಯಾದ ಬಾಳೆಹಣ್ಣಿನ ಇಡ್ಲಿ ಸವಿಯಲು ಸಿದ್ದ.
Comments