ರುಚಿ ರುಚಿಯಾದ ಸಬ್ಬಕ್ಕಿ ಲಡ್ಡು ಮಾಡುವ ವಿಧಾನ.
ಲಾಡು ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ.. ಒಂದೆ ರೀತಿಯ ಲಾಡು ತಿಂದು ಬೇಜಾರಾಗಿದ್ದರೆ ಈಗ ನಾವು ಹೇಳಿಕೊಡೋ ಲಡ್ಡು ನ ಒಮ್ಮೆ ಟ್ರೈ ಮಾಡಿ. ನಿಮಗೂ ಕೂಡ ಇಷ್ಟ ಆಗಬಹುದು. ಇದು ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಗಳಲ್ಲಿ ಇದು ಕೂಡ ಒಂದಾಗಿದೆ. ಈಗ ನಾವು ಹೇಳಿಕೊಡೋ ಲಾಡು ಯಾವುದು ಗೊತ್ತಾ.. ಸಬ್ಬಕ್ಕಿ ಲಾಡು.
ಸಬ್ಬಕ್ಕಿ ಲಾಡು ಮಾಡಲು ಬೇಕಾಗುವ ಸಾಮಾಗ್ರಿಗಳು
ಸಬ್ಬಕ್ಕಿ
ತುಪ್ಪ
ಒಣ ಕೊಬ್ಬರಿ ತುರಿ
ಏಲಕ್ಕಿ ಪುಡಿ
ಜಾಯಕಾಯಿ ಪುಡಿ
ಸಕ್ಕರೆ ಪುಡಿ
ಗೋಡಂಬಿ
ಸಬ್ಬಕ್ಕಿ ಲಾಡು ಮಾಡುವ ವಿಧಾನ:- ಮೊದಲಿಗೆ ಸಬ್ಬಕ್ಕಿಯನ್ನು ಪಾತ್ರೆಗೆ ಹಾಕಿ ಬಿಡಿ ಮಾಡಿಕೊಳ್ಳಿ.. ಸಬ್ಬಕ್ಕಿಯನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ. ತದ ನಂತರ 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.ನಂತರ ಸಬ್ಬಕ್ಕಿ ನುಣ್ಣ ಗೆ ಪುಡಿಮಾಡಿಕೊಳ್ಳಿ. ನಂತರ ಒಣಕೊಬ್ಬರಿಯನ್ನು ಸಣ್ಣ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿಕೊಳ್ಳಿ. ತದನಂತರ ಸಬ್ಬಕ್ಕಿಯನ್ನು ಅದಕ್ಕೆ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿ. ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಗೋಡಂಬಿಯನ್ನು ಉರಿದುಕೊಳ್ಳಿ. ಮೊದಲೆ ರೆಡಿ ಮಾಡಿಕೊಂಡ ಸಬ್ಬಕ್ಕಿ ಮತ್ತು ಕೊಬ್ಬರಿ ಮಿಶ್ರಣವನ್ನ ಸೇರಿಸಿ ಸಣ್ಣ ಉರಿಯಲ್ಲಿ ಚನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಏಲಕ್ಕಿ ಜಾಕಾಯಿ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ ಮಿಶ್ರಗೊಳಿಸಿ.. ಮತ್ತೆ ಆ ಮಿಶ್ರಣಕ್ಕೆ ತುಪ್ಪವನ್ನು ಸೇರಿಸಿ ಸ್ವಲ್ಪ ಹೊತ್ತು ಆರಲು ಬಿಡಿ. ಕೊನೆಯಲ್ಲಿ ಆ ಮಿಶ್ರಣವನ್ನು ಉಂಡೆಯನ್ನಾಗಿ ಮಾಡಿದರೆ ರುಚಿ ರುಚಿಯಾದ ಸಬ್ಬಕ್ಕಿ ಲಡ್ಡು ಸವಿಯಲು ಸಿದ್ದ.
Comments