ಕಾಫಿ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನ ಗೊತ್ತಾ ...?
ಕಾಫಿಯಿಂದ ಆರೋಗ್ಯಕ್ಕೆ ಆಗುವ ಲಾಭ ಮತ್ತು ಅಡ್ಡಪರಿಣಾಮಗಳ ಬಗ್ಗೆ ಚರ್ಚಗಳೇ ಹೆಚ್ಚು. ಆದ್ರೆ ಕಾಫಿಯಿಂದ ಆಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯ, ವಯಸ್ಸಾಗುತ್ತಾ ಇರುವಂತೆ ನಮ್ಮ ಕಾಡುವಂತಹ ಕೆಲವೊಂದು ಸಮಸ್ಯೆಗಳಿಗೆ ಕಾಫಿ ಒಳ್ಳೆಯ ಪರಿಹಾರ...ಸರಿ ಹಾಗಾದರೆ ಯಾವ್ಯಾವ ಕಾಯಿಲೆಗಳಿಗೆ ಕಾಫಿ ಒಳ್ಳೆಯದು ಎಂದು ತಿಳಿಯೋಣ ...
ಕಾಫಿ ಸುವಾಸನೆ ಕೇಳಿದರೆ ಯಾರಿಗಾದರೂ ಅದನ್ನು ಕುಡಿಯಬೇಕೆನಿಸುವುದು ಸಹಜ . ಅಂತಹ ಸುವಾಸನೆ ಹಾಗೂ ರುಚಿ ಹೊಂದಿರುವ ಕಾಫಿ ಬೆಳಗ್ಗೆ ಎದ್ದ ಕೂಡಲೇ ನಮ್ಮ ಹೊಟ್ಟೆ ಸೇರಿಕೊಳ್ಳುವುದು. ನಮ್ಮ ಹೊಸ ದಿನಗಳಿಗೆ ಶುಭಾಶಯ ಕೋರುವ ಸ್ನೇಹಿತ. ಹೆಚ್ಚಿನವರು ಬೆಳಿಗ್ಗೆದ್ದು ಕಾಫಿ ಸೇವನೆ ಮಾಡುವರು. ಕಾಫಿಯಿಂದ ಹಲವಾರು ರೀತಿಯ ಲಾಭಗಳು ಸಿಗುತ್ತದೆ ಎಂದು ಅಧ್ಯಯನಗಳು ಕೂಡ ಹೇಳಿವೆ.
ಮಧುಮೇಹವು ದೇಹದ ಒಂದು ಪ್ರಮುಖ ಸಮಸ್ಯೆಯಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕವು ನಿರ್ಮಾಣವಾಗಿ ಯಾವುದೇ ರೀತಿಯ ಇನ್ಸುಲಿನ್ ದೇಹದಲ್ಲಿ ಉತ್ಪತ್ತಿಯಾಗದೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದು. ಮಧುಮೇಹ ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆಯಿದೆ.
ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚಯಾಪಚಯಾ ಕ್ರಿಯೆಯ ಆರೋಗ್ಯವಾಗಿಸಿ, ಇನ್ಸುಲಿನ್ ಹಾರ್ಮೋನು ಸಮತೋಲ ಕಾಪಾಡಿಕೊಂಡು ವಯಸ್ಸಾಗುವ ವೇಳೆ ಬರುವ ಮಧುಮೇಹ ತಡೆಯುವುದು ಎಂದು ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಹೇಳಿದೆ.
ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿಗೆ ಸರಿಯಾಗಿ ರಕ್ತ ಸರಬರಾಜು ಆಗದೆ ಅದರ ಕೋಶಗಳಿಗೆ ಹಾನಿಯಾಗುವುದೇ ಪಾರ್ಶ್ವವಾಯು. ಇದು ತುಂಬಾ ಗಂಭೀರ ಮತ್ತು ಪ್ರಾಣಹಾನಿ ಉಂಟು ಮಾಡುವ ಕಾಯಿಲೆ. ಪ್ರತೀ ದಿನ ಒಂದು ಸಣ್ಣ ಕಪ್ ಕಾಫಿ ಸಕ್ಕರೆ ಹಾಕದೆ ಸೇವಿಸಿದರೆ ಅದರಿಂದ ರಕ್ತನಾಳಗಳು ಸರಾಗವಾಗಿ ಕೆಲಸ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆದು ಪಾರ್ಶ್ವವಾಯು ತಡೆಯುವುದು.ಆಲ್ಝೈಮೆರ್ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಮೆದುಳಿನ ಜೀವಕೋಶದ ನೆನಪು, ಕಾರ್ಯ ಮತ್ತು ಕೌಶಲ್ಯ ಹಾಳುಗೆಡವುದು. ಇದರಿಂದ ಆ ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮವಾಗುವುದು.ಕಾಫಿಯಲ್ಲಿ ಇರುವಂತಹ ಕೆಫಿನ್ ಮೆದುಳಿನ ಕೋಶಗಳು ಆರೋಗ್ಯವಾಗಿ ಹಾಗೂ ದೀರ್ಘಕಾಲ ತನಕ ಚಟುವಟಿಕೆಯಿಂದ ಇರುವಂತೆ ಮಾಡುವುದು. ಇದರಿಂದ ಆಲ್ಝೈಮೆರ್ ಕಾಯಿಲೆ ತಡೆಯಬಹುದು ಎಂದು ಅಮೆರಿಕಾದ ಸಂಶೋಧನಾ ವರದಿ ಹೇಳಿದೆ.
Comments