ದಕ್ಷಿಣ ಭಾರತದ ಆಹಾರ ರವಾ ಇಡ್ಲಿ
ರವಾ ಇಡ್ಲಿ ಇದು ಒಂದು ರವೆಯಿಂದ ತಯಾರಿಸುವ ದಕ್ಷಿಣ ಭಾರತದ ಆಹಾರಪದ್ದತಿ. ಸಾಮಾನ್ಯವಾಗಿ ಇಡ್ಲಿಯನ್ನು ಅಕ್ಕಿ ಬಳಸಿ ತಯಾರಿಸಲಾಗುತ್ತದೆ. ಆದರೆ ನಮ್ಮ ಕರ್ನಾಟಕದಲ್ಲಿ ಇಡ್ಲಿಗೆ ವಿಶೇಷವಾದ ಮೆರುಗನ್ನು ನೀಡಿದ್ದೇವೆ. ಇಲ್ಲಿ ನಾವು ಆರೋಗ್ಯಕರವಾದ ಇಡ್ಲಿಯನ್ನು ರವೆಯನ್ನು ಬಳಸಿ ತಯಾರಿಸುತ್ತೇವೆ. ರವೆಯನ್ನು ಬಳಸಿ ನಾವು ಹೆಚ್ಚು ರುಚಿಕರವಾದ ಮತ್ತು ಆರೋಗ್ಯಕರವಾದ ಇಡ್ಲಿಯನ್ನು ತಯಸಿಸುವ ವಿಧಾನವನ್ನು ಈ ಕೆಳಗೆ ವಿವರಿಸಿದ್ದೇವೆ.
INGREDIENTS:
- 1 ಕಪ್ ರವೆ
- 1 ಕಪ್ ಮೊಸರು
- 1 ಮಧ್ಯಮ ಗಾತ್ರದ ಕ್ಯಾರೆಟ್
- ಕೊತ್ತುಂಬರಿ ಎಲೆಗಳು
- 4 ಗೋಡಂಬಿ
- ಒಂದು ಸ್ವಲ್ಪ ಅಡಿಗೆ ಸೋಡಾ
- ರುಚಿಗೆ ತಕ್ಕಷ್ಟು ಉಪ್ಪು
- 1 ಚಮಚ ಎಣ್ಣೆ
- 1 ಟೀ ಚಮಚ ಸಾಸಿವೆ
- ಸ್ವಲ್ಪ ಇಂಗು
- 2 ಕತ್ತರಿಸಿದ ಹಸಿ ಮೆಣಸಿನಕಾಯಿಗಳು
- 1 ಇಂಚು ಕತ್ತರಿಸಿದ ಶುಂಠಿ
- 2 ರಿಂದ 3 ಕರಿಬೇವು ಎಲೆಗಳು
INSTRUCTIONS:
- ಇಡ್ಲಿ ತಯಾರು ಪ್ರಾರಂಭಿಸುವ ಮೊದಲು ತರಕಾರಿ ಮತ್ತು ಮತ್ತು ಶುಂಠಿಯನ್ನು ಕತ್ತರಿಸಿ ಇಟ್ಟುಕೊಳ್ಳಿ.
- ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಸಾಸಿವೆ ಮತ್ತು ಶುಂಠಿ ಹಾಕಿ ನಂತರ ಕರಿಬೇವು ಮತ್ತು ರವೆಯನ್ನು ಹಾಕಿ ಕೆಲವು ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಮಿಶ್ರಣವನ್ನು ತಣ್ಣಗಾಗಲು ಬಿಡಿ.
- ರವಾ ತಂಪಾದ ನಂತರ ಮೊಸರು, ಕತ್ತರಿಸಿದ ತರಕಾರಿಗಳು, ಉಪ್ಪು , ಮತ್ತು ಅಡಿಗೆ ಸೋಡಾವನ್ನು ಮಿಶ್ರಣಕ್ಕೆ ಹಾಕಿ ನಿಧಾನವಾಗಿ ನೀರು ಸೇರಿಸಿ ಮತ್ತು ಯಾವುದೇ ಉಂಡೆಗಳು ಬರದಂತೆ ಚನ್ನಾಗಿ ಕಲಸಿ.
- 15 ನಿಮಿಷಗಳ ಕಾಲ ಹಾಗೆ ಬಿಡಿ. ಇಡ್ಲಿ ಬಟ್ಟಲಿಗೆ ಎಣ್ಣೆ ಸವರಿ ಮಿಶ್ರಣವನ್ನು ಹಾಕಿ ಗೋಡಂಬಿಯಿಂದ ಅಲಂಕರಿಸಿ ಕುಕ್ಕರ್ ನಲ್ಲಿ ಇಟ್ಟು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. 5 ನಿಮಿಷ ತಣ್ಣಗಾದ ಮೇಲೆ ತೆಗೆಯಿರಿ ಇಗ ರುಚಿ ರುಚಿಯಾದ ರವಾ ಇಡ್ಲಿ ಟೊಮ್ಯಾಟೋ ಚಟ್ನಿ ಅಥವಾ ಸಾಗು ಜೊತೆ ಸವಿಯಲು ಸಿದ್ಧ.
Comments