ದಕ್ಷಿಣ ಭಾರತದ ಪ್ರಸಿದ್ದ ತಿಂಡಿ ಚಕ್ಕುಲಿ
ಚಕ್ಕುಲಿ ಪಾಕವಿಧಾನ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಒಂದು ಪ್ರಸಿದ್ದವಾದ ತಿಂಡಿಯಾಗಿದೆ. ಈ ಗರಿಗರಿಯಾದ, ಸೊಗಸಾದ ತಿಂಡಿ ಸವಿಯಲು ರುಚಿಯಾಗಿ ಮತ್ತು ಹಿತವಾಗಿ ಇರುತ್ತದೆ. ಚಕ್ಕುಲಿ ಪಾಕವಿಧಾನ ಸಾಮಾನ್ಯವಾಗಿ ಚಹಾ ಅಥವಾ ಬಿಸಿ ಕಾಫಿ ಜೊತೆಗೆ ತಿನ್ನಲಾಗುತ್ತದೆ.
ಇದು ದೇಶದ ಅನೇಕ ಭಾಗಗಳಲ್ಲಿ ಒಂದು ಸಾರ್ವಕಾಲಿಕ ತಿಂಡಿಯಾಗಿದೆ. ಹಬ್ಬದ ಸಮಯದಲ್ಲಿ ಚಕ್ಕುಲಿ ತಯಾರಿಕೆ ಒಂದು ವಿಶೇಷ ಪದ್ದತಿ ಆಗಿರುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಹಬ್ಬಗಳ ಆಚರಣೆಯಲ್ಲಿ ವಿವಿಧ ರೀತಿಯ ಚಕ್ಕುಲಿಯನ್ನು ತಯಾರಿಸಲಾಗುತ್ತದೆ. ಈ ಕೆಳಗೆ ನಾವು ವಿಶೇಷವಾದ ಚಕ್ಕುಲಿ ತಯಾರಿಸುವ ವಿಧಾನವನ್ನು ವಿವರಿಸಿದ್ದೇವೆ.
INGREDIENTS :
- 250 ಗ್ರಾಂ ಇಡ್ಲಿ ಅಕ್ಕಿ 50 ಗ್ರಾಂ ಉದ್ದಿನ ಬೇಳೆ
- 50 ಗ್ರಾಂ ಪುಟಾಣಿ
- 3 ಚಮಚ ಬೆಣ್ಣೆ
- 2 ಚಮಚ ಮೆಣಸಿನ ಪುಡಿ
- 2 ಚಮಚ ಎಳ್ಳು (ಕಪ್ಪು / ಬಿಳಿ ಎಳ್ಳು )
- 2 ಟೀ ಚಮಚ ಜೀರಿಗೆ
- 2 ಟೀ ಚಮಚ ಅಜ್ವೈನ್
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
INSTRUCTIONS :
- ಒಂದು ಪ್ಯಾನ್ನಲ್ಲಿ ಅಕ್ಕಿ , ಉದ್ದಿನ ಬೇಳೆ ,ಪುಟಾಣಿ ಎಲ್ಲವನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಎಲ್ಲವನ್ನು ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ. ಪುಡಿ ಮಾಡಿದ ಹಿಟ್ಟಿಗೆ ಅಜೀವಾನ, ಉಪ್ಪು, ಮೆಣಸಿನ ಪುಡಿ , ಜೀರಿಗೆ , ಎಳ್ಳು , ಬಿಸಿ ಮಾಡಿದ ಬೆಣ್ಣೆ ಸೇರಿಸಿ ಕೈಯಿಂದ ಕಲಸಿಟ್ಟುಕೊಳ್ಳಿ.
- ಈಗ ಮೇಲೆ ತಿಳಿಸಿದ ಮಿಶ್ರಣಕ್ಕೆ ಅರ್ಧ ಕಪ್ ಬಿಸಿ ನೀರನ್ನು ಸೇರಿಸಿ ಮೃದುವಾಗಿ ಕಲಸಿ.
- 10 ನಿಮಿಷದ ನಂತರ ಚಕ್ಕುಲಿ ಮಾಡುವ ಸಾಧನದಿಂದ ಸುರಳಿಯಾಕಾರದಲ್ಲಿ ತಯಾರಿಸಿದ ಚಕ್ಕುಲಿಯನ್ನು ಕುದಿಯುವ ಎಣ್ಣೆಯಲ್ಲಿ ಬಿಡಿ. ನಂತರ ಚಕ್ಕುಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಈಗ ಬಿಸಿ ಬಿಸಿ ಚಕ್ಕುಲಿ ಸವಿಯಲು ಸಿದ್ಧ.
Comments