ದಕ್ಷಿಣ ಭಾರತದ ಪ್ರಮುಖ ಸಿಹಿ ತಿಂಡಿ ಹೋಳಿಗೆ
ಹೋಳಿಗೆಯನ್ನು ಒಬ್ಬಟ್ಟು ಎಂದು ಕೂಡ ಕರೆಯಲಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಸಿಹಿ ತಿಂಡಿಗಳಲ್ಲಿ ಇದು ಒಂದಾಗಿದೆ .ಇದನ್ನು ಮದುವೆಗಳಲ್ಲಿ ಪ್ರಮುಖ ಪಾಕವಾಗಿ ಮತ್ತು ದಸರಾ, ಗೌರಿ ಪೂಜೆ , ಗಣೇಶ ಚತುರ್ಥಿ, ಯುಗಾದಿ , ಇತ್ಯಾದಿ ಹಬ್ಬಗಳ ಆಚರಣೆಗಳಲ್ಲಿ ತಯಾರಿಸಲಾಗುತ್ತದೆ. ಮೈದಾ ಹಿಟ್ಟಿನಲ್ಲಿ ಸಿಹಿ ಹುರಣವನ್ನು ತುಂಬಿ ತುಪ್ಪ ಹಾಕಿ ಬೇಯೆಸಿ ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಪಾಕವಿಧಾನ ಮಹಾರಾಷ್ಟ್ರದ ಪೂರನ್ಪಲ್ಲಿ ಹೋಲಿಕೆ ಹ
INGREDIENTS:
- 1/4 ಕೆಜಿ ಬೇಳೆ
- 1/2 ಕೆಜಿ ಬೆಲ್ಲ
- 1/4 ಕೆಜಿ ಪೇಣೆ ರವ / ಚಿರೋಟಿ ರವ
- 50 ಗ್ರಾಂ ಮೈದಾ
- 2 ಚಮಚ ಕಾಯಿ ತುರಿ
- 1/4 ಚಮಚ ಏಲಕ್ಕಿ ಪುಡಿ
- 1/4 ಚಮಚ ಅರಿಶಿನ
- 1/4 ಕಪ್ ಎಣ್ಣೆ
INSTRUCTIONS:
- ಮೈದಾ ,ರವ, ಅರಿಶಿನ , ನೀರು ಹಾಕಿ ಚನ್ನಾಗಿ ಕಲಸಿ. ಇದಕ್ಕೆ 3 ಚಮಚ ಎಣ್ಣೆ ಸೇರಿಸಿ ಕಣಕ ತಯಾರಿಸಿಕೊಳ್ಳಿ.
- ಬೇಳೆಯನ್ನು 3 ಕಪ್ ನೀರು ಹಾಕಿ ಬೇಯೆಸಿ( ನಿಮಿಷ) ನಂತರ ನೀರು ಬೇರ್ಪಡಿಸಿ.
- ಬೇಳೆ, ಕಾಯಿ ತುರಿ, ಏಲಕ್ಕಿ ಪುಡಿ ,ಬೆಲ್ಲ ಹಾಕಿ ನುಣ್ಣಗೆ ರುಬ್ಭಿ
- ನಿಂಬೆ ಗಾತ್ರದ ಮೈದಾವನ್ನು ತಟ್ಟಿ ಮಧ್ಯದಲ್ಲಿ ಹುರಣವನ್ನು ಇಟ್ಟು ಚಪಾತಿಯಂತೆ ಉದ್ದಿ.
- ಕಾದ ಕಾವಲಿಗೆ ಉದ್ದಿದ ಹೋಳಿಗೆ ಹಾಕಿ. ಇದಕ್ಕೆ ಸ್ವಲ್ಪ ಎಣ್ಣೆ / ತುಪ್ಪ ಹಾಕಿ ಎರಡು ಬದಿ ಬೇಯೆಸಿ.
- ಬಿಸಿ ಬಿಸಿ ಹೋಳಿಗೆ ಸವಿಯಲು ಸಿದ್ದ
Comments