ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಭಾರತಕ್ಕೆ ಹೆಚ್ಚಿನ ಆದ್ಯತೆ:ಜೋ ಬಿಡೆನ್
ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ನಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಗೆದ್ದರೆ ಭಾರತಕ್ಕೆ ಹೆಚ್ಚು ಆದ್ಯತೆ ಮತ್ತು ಪ್ರಾಶಸ್ತ್ಯ ನೀಡುವುದಾಗಿ ಡೆಮೆಕ್ರಾಟ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಬೀಕನ್ ಕ್ಯಾಪಿಟಲ್ ಪಾಲುದಾರರ ಅಧ್ಯಕ್ಷ ಮತ್ತು ಸಿಇಒ ಅಲನ್ ಲೆವೆಂಥಾಲ್ ಆಯೋಜಿಸಿದ್ದ ವರ್ಚುವಲ್ ನಿಧಿಸಂಗ್ರಹಣೆ ಸಂದರ್ಭದಲ್ಲಿ ಬಿಡೆನ್ ಅವರ ಈ ಅಭಿಪ್ರಾಯಗಳು ಬಂದವು. ಭಾರತದೊಂದಿಗನ ಪಾಲುದಾರಿಕೆ, ಕಾರ್ಯತಂತ್ರದ ಸಹಭಾಗಿತ್ವ, ನಮ್ಮ ಭದ್ರತೆಯಲ್ಲಿ ಅಗತ್ಯ ಮತ್ತು ಮುಖ್ಯವಾಗಿದೆ. ನಮ್ಮ ಸಂಬಂಧದಲ್ಲಿ ಹೆಚ್ಚಿನ ಪ್ರಗತಿಗೆ ಬಾಗಿಲು ತೆರೆಯಲು ಸಹಾಯ ಮಾಡುವುದು ಮತ್ತು ಭಾರತದೊಂದಿಗಿನ ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದು ಒಬಾಮಾ-ಬಿಡೆನ್ ಆಡಳಿತದಲ್ಲಿ ಹೆಚ್ಚಿನ ಆದ್ಯತೆಯಾಗಿತ್ತು. ನಮ್ಮ ಆಡಳಿತದಲ್ಲಿ, ಒಂದು ದಶಕದ ಹಿಂದೆ ಅಮೆರಿಕಾ-ಭಾರತ ನಾಗರಿಕ ಪರಮಾಣು ಒಪ್ಪಂದಕ್ಕೆ ಕಾಂಗ್ರೆಸ್ಸಿನ ಅನುಮೋದನೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಎಂದು ಸ್ಮರಿಸಿದರು.
Comments