ಶೊಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ FIR

ಕೇರಳದಲ್ಲಿ ಹಿಂದೂಗಳಿಗೆ ಕುಡಿಯಲು ನೀರು ಕೊಡದೆ ತಾರತಮ್ಯ ಮಾಡಲಾಗುತ್ತಿದೆ. ಕೇರಳ ಮತ್ತೊಂದು ಕಾಶ್ಮೀರವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ.
ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್ ಹಿಂದೂಗಳಿಗೆ ನೀರು ಸರಬರಾಜು ನಿರಾಕರಿಸಿದೆ. ಈ ಪ್ರದೇಶದಲ್ಲಿ ಸೇವಾ ಭಾರತಿ ನೀರು ಸರಬರಾಜು ಮಾಡುತ್ತಿದೆ ಎಂದು ಟ್ವಿಟ್ ಮಾಡಿದ್ದರು. ಈ ಟ್ವೀಟ್ ಧರ್ಮ, ಜನಾಂಗಗಳ ನಡುವೆ ದ್ವೇಷಕ್ಕೆ ಕಾರಣವಾಗುವಂತಹ ಹಿನ್ನಲೆಯಲ್ಲಿ ಕೇರಳ ಪೊಲೀಸರು ಶೋಭಾ ಕರಂದ್ಲಾಜೆ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments