ಕಾಂಗ್ರೆಸ್ ಶಾಸಕನ ಹತ್ಯಗೆ ಸಂಚು..!!! ಮಾಡಿದ್ದು ಯಾರ್ ಗೊತ್ತಾ..?
ರಾಜ್ಯ ರಾಜಕೀಯದಲ್ಲಿ ದುಷ್ಮನ್ ಗಳು ಜಾಸ್ತಿ ಎನ್ನುವುದು ಎಲ್ಲರಿಗೂ ತಿಳಿದೆ ಇದೆ.. ಅಧಿಕಾರದ ವಿಷಯ ಬಂದರೆ ಸಾಕು ಸಂಬಂಧಗಳಲ್ಲಿಯೇ ಹೊಡಕು ಉಂಟಾಗುತ್ತದೆ.. ಅದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ರಾಜಕೀಯ ವಲಯದಲ್ಲಿ ಕಾಣ ಸಿಗುತ್ತವೆ..ಇದೀಗ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಭೈರತಿ ಗ್ರಾಮದಲ್ಲಿ ಸುರೇಶ್ ಅವರು ಇದ್ದ ವೇಳೆಯಲ್ಲಿ ಶಿವು ಎನ್ನುವ ವ್ಯಕ್ತಿ ಅವರಿಗೆ ಚಾಕುವಿನಿಂದ ಇರಿಯಲು ಯತ್ನ ಮಾಡಲಾಗಿದೆ ಎನ್ನಲಾಗಿದ್ದು, ಸದ್ಯ ಆತನನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆರೋಪಿ ಶಿವು ಶಾಸಕರಿಗೆ ಪರಿಚಯವಿದ್ದ ಎನ್ನಲಾಗಿದ್ದು, ಹೀಗಾಗಿ ಘಟನೆ ಬಗ್ಗೆ ನಾನಾ ಅನುಮಾನಗಳು ಹುಟ್ಟಿಕೊಂಡಿದ್ದಾವೆ. ಭೈರತಿ ಸುರೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಈ ಪ್ರಕರಣ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ರಾಜಕೀಯ ವಲಯದಲ್ಲಿ ಇದೆಲ್ಲಾ ಕಾಮನ್ ಎಂದುಕೊಂಡರು ಅಧಿಕಾರದ ಆಸೆಗಾಗಿ ಇಷ್ಟೆಲ್ಲಾ ಮಾಡುವುದು ಮಾನವೀಯತೆ ಅಲ್ಲ ಎಂಬದು ಸ್ಪಷ್ಟವಾಗಿ ತಿಳಿಯುತ್ತದೆ.
Comments