ಫೆಬ್ರವರಿ ಒಳಗಾಗಿ ಬಿಜೆಪಿ ಸರ್ಕಾರ ಉರುಳಲಿದೆ ಎಂದ ಮಾಜಿ ಸಿಎಂ..!!
ಇತ್ತಿಚಿಗಷ್ಟೆ ನೆರೆ ಪೀಡಿತ ಪ್ರದೇಶಗಳಿಗೆ ಬಿಜೆಪಿ ಸರ್ಕಾರವು ನೆರವಾಗುವಲ್ಲಿ ವಿಫಲಗೊಂಡಿತ್ತು… ಇದನ್ನು ವಿರೋಧ ಪಕ್ಷಗಳು ನೋಡಿ ಬಿಜೆಪಿ ಪಕ್ಷದ ಬಗ್ಗೆ ಧೋರಣೆಯನ್ನು ವ್ಯಕ್ತ ಪಡಿಸಿದ್ದರು..ಹಾಗಾಗಿ ವಿರೋಧ ಪಕ್ಷಗಳು ಸರ್ಕಾರ ಪತನದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಫೆಬ್ರವರಿ ಒಳಗಾಗಿ ಸರ್ಕಾರ ಉರುಳಿ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ರಾಜ್ಯಕ್ಕೆ ಬಿಜೆಪಿ ವತಿಯಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು ಕೇಂದ್ರೀಯ ಬಿಜೆಪಿ ನಾಯಕತ್ವಕ್ಕೆ ಅನಿವಾರ್ಯವಾಗಿತ್ತು. ರಾಜ್ಯದ ಜನರ ಸಂಕಷ್ಟಕ್ಕೆ ನೆರವಾಗುವಲ್ಲಿ ಯಡಿಯೂರಪ್ಪ ಮತ್ತು ಮೋದಿ ವಿಫಲರಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಅದಾಗಲೇ 3 ತಿಂಗಳಾಗಿವೆ. ಆದರೂ ಕೂಡ ನೆರೆ ಪೀಡಿತ ಜನರಿಗೆ ಸೂಕ್ತ ರೀತಿಯ ನೆರವು ನೀಡುತ್ತಿಲ್ಲ. ಪ್ರವಾಹ ಪೀಡಿತ ಜನರ ಸಂಕಷ್ಟ ಪರಿಹರಿಸುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿ ಕಾರಿದ್ದರು. ದೋಸ್ತಿ ಸರ್ಕಾರ ಪತನವಾದ ಮೇಲೆ ಸಾಕಷ್ಟು ರೀತಿಯ ಧೋರಣೆಗಳನ್ನು ಬಿ’ಜೆಪಿ ಸರ್ಕಾರದ ಮೇಲೆ ಹೇರುತ್ತಿದೆ.. ಮುಂಬರುವ ದಿನಗಳಲ್ಲಿ ರಾಜಕೀಯ ಯಾವ ರೀತಿ ಸ್ಥಿರತೆಯನ್ನು ಕಂಡು ಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
Comments