ಜೆಡಿಎಸ್ ಗೆ ಬಿಗ್ ಶಾಕ್..!! ಪಕ್ಷ ಬಿಡುತ್ತಾರಂತೆ ಮತ್ತಿಬ್ಬರು ಶಾಸಕರು..!!!!

16 Oct 2019 9:32 AM | Politics
3480 Report

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿಚಾರಗಳು ಸಖತ್ ಸದ್ದು ಮಾಡುತ್ತಿದೆ.. ದೋಸ್ತಿ ಸರ್ಕಾರ ಪತನವಾದ ಮೇಲೆ ಬಿಜೆಪಿ ಸರ್ಕಾರ ಅಧಿಕಾಕ್ಕೆ ಬಂದಿದೆ.. ಆದರೆ ಪಕ್ಷಗಳ ಒಳಗೊಳಗೆ ಸಾಕಷ್ಟು ಅಸಮಾಧಾನ ಭುಗಿಲೆದಿದ್ದೆ.. ದೋಸ್ತಿಗಳಿಗೆ ಕೈಕೊಟ್ಟ ಶಾಸಕರು ಸದ್ಯ ಇನ್ನೂ ಕೂಡ ಅತಂತ್ರ ಸ್ಥಿತಿಯಲ್ಲಿಯೇ ಇದ್ದಾರೆ. ಹಾಗಾಗಿದ್ದರು ಕೂಡ ಮತ್ತೆ ಕೆಲವು ಶಾಸಕರು ಪಕ್ಷದಿಂದ ಹೊರ ಬರಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ..

ಇದೀಗ ಜೆಡಿಎಸ್ ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದ್ದು ಶಾಸಕರು ಮತ್ತು ಇಬ್ಬರು ವಿಧಾನಪರಿಷತ್ ನ  ಸದಸ್ಯರು ಪಕ್ಷ ಬಿಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ..  ಉಪ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ 12 ಶಾಸಕರು ಪಕ್ಷದಿಂದ ದೂರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ... ಸಮ್ಮಿಶ್ರ ಸರ್ಕಾರ ಪತನವಾದ ನಂತರ ಕೂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬದಲಾಗಿಲ್ಲ. ಒಂದಿಬ್ಬರನ್ನು ಹೊರತುಪಡಿಸಿ ಉಳಿದ ಮುಖಂಡರನ್ನು ಪರಿಗಣಿಸುತ್ತಿಲ್ಲ. ಈಗಾಗಲೇ ಶಾಸಕರು ಪಕ್ಷದಿಂದ ಹೊರ ಹೋಗಲು ಮುಂದಾಗಿದ್ದಾರೆ. ಹಳೆ ಮೈಸೂರು ಭಾಗದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಬಿಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ ರಾಜಕೀಯದ ಮುಂದಿನ ನಡೆ ತೀವ್ರ ಕುತೂಹಲವಾಗಿದೆ.

Edited By

Manjula M

Reported By

Manjula M

Comments