ಹಳ್ಳಿ ಹಕ್ಕಿ ವಿರುದ್ಧ ಹೀರೋಹಿನ್ ಬಾಂಬ್ ಸಿಡಿಸಿದ್ದ ಸಾರಾ ಮಹೇಶ್
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್ ಅವರು ಅನರ್ಹ ಶಾಸಕ ಹೆಚ್ ವಿಶ್ವನಾಥ್ ವಿರುದ್ಧ ಹೀರೋಹಿನ್ ಬಾಂಬ್ ಸಿಡಿಸಿದ್ದಾರೆ.
ಇಂದು ಎಚ್ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಸಾರಾ ಮಹೇಶ್ ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ, ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಕೊಚ್ಚೆಗುಂಡಿ ನೀವು, ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿ ಕೊಳ್ಳುತ್ತೀರಾ ನಿಮ್ಮ ಬಗ್ಗೆ ಮಾತನಾಡಿದರೆ ಬಾಯಿ ಹೊಲಸು ಎಂದು ವಾಗ್ದಾಳಿ ನಡೆಸಿದ್ದಾರೆ.
Comments