ಡಿಕೆಶಿವಕುಮಾರ್ ಪುತ್ರಿ ಐಶ್ವರ್ಯಾ ಆಸ್ತಿ ಎಷ್ಟು ಗೊತ್ತಾ..?
ಈಗಾಗಲೇ ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಕಸ್ಟಡಿಯಲ್ಲಿದ್ದಾರೆ. ಇದೀಗ ಅವರ ಮಗಳು ಐಶ್ವರ್ಯ ಕೂಡ ವಿಚಾರಣೆಗೆ ಹಾಜರಾಗುವಂತೆ ಇಡಿಯಿಂದ ಸಮನ್ಸ್ ಜಾರಿಯಾಗಿದೆ. ಇದೀಗ ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಅವರ ಹೆಸರಿನಲ್ಲಿರುವ ಆಸ್ತಿ ಬಹಿರಂಗವಾಗಿದೆ.
ಐಶ್ವರ್ಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ನ ಟ್ರಸ್ಟಿ ನಲ್ಲಿ ಡಿಕೆಶಿ ಮಗಳ ಹೆಸರಿನಲ್ಲಿ ಹೂಡಿಕೆ ಇದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ 24 ಕೋಟಿ ಮೌಲ್ಯದ ಜಾಗ ಐಶ್ವರ್ಯ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಮುಂಬೈನಲ್ಲಿ 1.2 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಇವರ ಹೆಸರಿಗೆ ಇದೆ. ಸೋಲ್ ಸ್ಪೇಸ್ ಪ್ರಾಜೆಕ್ಷ್ಟ್ ಲಿ. ನವರಿಗೆ 76.11 ಕೋಟಿ ರೂ. ಸಾಲ ಕೊಟ್ಟಿದ್ದಾರೆ. ಒಟ್ಟು 81.92 ಕೋಟಿ ರೂ.ಲ ಸಾಲ ಐಶ್ವರ್ಯ ಹೆಸರಿನಲ್ಲಿದೆ. ಐಶ್ವರ್ಯ ಹೆಸರಿನಲ್ಲಿ ಘೋಷಿತ ಆಸ್ತಿಯೇ 108 ಕೋಟಿ ರೂ. ಇದೆ. 2018 ರ ಚುನಾವಣೆ ವೇಳೆ ಐಶ್ವರ್ಯ ಆಸ್ತಿ ಘೋಷಣೆ ಮಾಡಲಾಗಿತ್ತು. ಐಶ್ವರ್ಯ ಹೆಸರಿನಲ್ಲಿ 102 ಕೋಟಿ ಮೌಲ್ಯದ 102 ಕೋಟಿ. ಚರಾಸ್ತಿ 5.17 ಕೋಟಿ ಇರುವುದಾಗಿ ಘೋಷಣೆ ಮಾಡಿದ್ದರು. ಒಟ್ಟಿನಲ್ಲಿ ಮಗಳ ಹೆಸರಿನಲ್ಲಿಯೆ ಇಷ್ಟೊಂದು ಹಣವನ್ನು ಇಟ್ಟಿರುವ ಡಿಕೆಶಿ ಅವರಿಗೆ ಸಂಕಷ್ಟಗಳು ಒಂದರ ಮೇಲೊಂದು ಆವರಿಸಿಕೊಳ್ಳವುತ್ತಿವೆ. ನಾಳೆ ಐಶ್ವರ್ಯಗೆ ವಿಚಾರಣೆಗೆ ಹೋಗಲಿದ್ದಾರೆ. ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments