ಹೊಸ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್..!!
ದೋಸ್ತಿ ಸರ್ಕಾರ ರಚನೆಯಾದ ಮೇಲೆ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಯಾರ ಸಾಲ ಮನ್ನಾ ಆಗಿದೆಯೋ ಗೊತ್ತಿಲ್ಲ..ಆದರೆ ಇದೀಗ ಹೊಸ ಬೆಳೆ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರ ಶಾಕ್ ನೀಡಿದೆ. ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಬ್ರೇಕ್ ಹಾಕಲಾಗಿದ್ದು, ಸಂಪನ್ಮೂಲ ಕೊರತೆ ಕಾರಣದಿಂದ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸದ್ಯಕ್ಕೆ ಬ್ರೇಕ್ ಆಗಿದೆ.
ಸರ್ಕಾರದ ಸೂಚನೆ ಮೇರೆಗೆ ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಹಣಕಾಸು ಇಲಾಖೆ ತಡೆಹಿಡಿದಿದೆ. ಸಹಕಾರ ಇಲಾಖೆಯ ಮೂಲಕ ಸಲ್ಲಿಕೆಯಾಗಿದ್ದ ಸುಮಾರು 1450 ಕೋಟಿ ರೂ. ಬಿಡುಗಡೆಗೆ ಬ್ರೇಕ್ ಹಾಕಲಾಗಿದೆ ಎಂದು ಹೇಳಲಾಗಿದೆ.ಇದರಿಂದಾಗಿ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಬಹುತೇಕ ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಬಳಲಿಹೋಗಿವೆ.. ಸಾಲದ ಕಂತು ಮರುಪಾವತಿ ಮುಗಿದ ರೈತರ ಖಾತೆಗಳಿಗೆ ಮರುಪಾವತಿ ಹಣ ಬಂದಿಲ್ಲ. ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಯಾವುದೇ ಸರ್ಕಾರ ಬಂದರೂ ಮೊದಲು ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇವೆ… ಹೊಸ ಬೆಳೆ ಸಾಲ ನೀಡುತ್ತವೆ ಎಂದು ರೈತರ ಮೊಗದಲ್ಲಿ ಸಂತಸವನ್ನು ತರುತ್ತಾರೆ. ಆದರೆ ಯಾವುದು ಕೂಡ ಪರಿಪೂರ್ಣವಾಗಿ ಆಗುವುದಿಲ್ಲ… ಹೀಗಾಗಿ ಯಾವುದೇ ಸರ್ಕಾರ ಬಂದರೂ ಕೂಡ ರೈತರು ಪರದಾಡುವುದಂತೂ ಸುಳ್ಳಲ್ಲ..
Comments