ದೋಸ್ತಿಗಳಿಗೆ ಕೈ ಕೊಟ್ಟ ಅನರ್ಹ ಶಾಸಕರಿಗೆ `ಬಿಗ್ ಶಾಕ್'

ಸದ್ಯ ದೋಸ್ತಿ ನಾಯಕರಿಗೆ ಕೈಕೊಟ್ಟು ಸಮ್ಮಿಶ್ರ ಸರ್ಕಾರ ಪತನವಾಗುವುದಕ್ಕೆ ಕಾರಣವಾದ ಅತೃಪ್ತ ಶಾಸಕರು ಸದ್ಯ ಅತಂತ್ರರಾಗಿದ್ದಾರೆ.ಸುಪ್ರೀಂ ಕೋರ್ಟ್ ಅನರ್ಹ ಶಾಸಕರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಕೊಟ್ಟಿತ್ತು.. ಅನರ್ಹ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 11 ಕ್ಕೆ ಫೀಕ್ಸ್ ಮಾಡಲಾಗಿತ್ತು.. ಆದರೆ ಇದೀಗ ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆಪ್ಟೆಂಬರ್ 11 ರ ಬದಲಿಗೆ 16 ರಂದು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ರಮೇಶ್ ಜಾರಕಿಹೊಳಿ ಸೇರಿದಂತೆ 17 ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಹಾಲ್ ನಂಬರ್ 3 ರಲ್ಲಿ ಸೆ. 11 ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿತ್ತು. ಆದರೆ ದಿಢೀರನೇ ರಮೇಶ್ ಜಾರಕಿಹೊಳಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಕಲಾಪ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಡಿಲೀಟ್ ಗೆ ಕಾರಣ ಏನೆಂಬುದು ತಿಳಿದಿಲ್ಲ. ಪ್ರಕರಣದ ವಕಾಲತುವಹಿಸಿರುವ ಹಿರಿಯ ವಕೀಲರು 11 ರಂದು ಕೋರ್ಟ್ ನಲ್ಲಿ ಈ ವಿಷಯ ಪ್ರಸ್ತಾಪಿಸಲು ಸಿದ್ಧರಾಗಿದ್ದಾರೆ. ಒಂದು ವೇಳೆ ಅಂದು ಪ್ರಸ್ತಾಪಕ್ಕೆ ಅವಕಾಶ ದೊರೆತರೆ ಬಹುತೇಕ 16 ರಂದು ಅರ್ಜಿ ವಿಚಾರಣೆ ನಿಗದಿಯಾಗುವ ಸಾಧ್ಯತೆ ಇದೆ. ಅನರ್ಹ ಶಾಸಕರು ಸದ್ಯ ಅತಂತ್ರ ಸ್ಥಿತಿಯ್ಲಲಿರುವುದು ಸುಳ್ಳಲ್ಲ… ಮುಂದೆ ಅವರ ಅರ್ಜಿ ವಿಚಾರಣೆಗ ಅವರು ಹೇಳಿರುವ ದಿನಾಂಕಕ್ಕೆ ನಡೆಯುತ್ತದೆಯೋ ಅಥವಾ ಮತ್ತೆ ಬದಲಾಗುತ್ತದೆಯೋ ಕಾದು ನೋಡಬೇಕಿದೆ.
Comments