ಬಿಜೆಪಿ ಸರ್ಕಾರದ  ಪತನ ಯಾವಾಗ ಗೊತ್ತಾ..? ಭವಿಷ್ಯ ನುಡಿದ HDK..!!

10 Sep 2019 8:58 AM | Politics
4563 Report

ಅಂದಹಾಗೆ ಈಗಾಗಲೇ ದೋಸ್ತಿ ಸರ್ಕಾರ ಪತನಗೊಂಡು ತಿಂಗಳು ಕಳೆದಿವೆ. ಆದರೂ ಪಕ್ಷಗಳ ಮೇಲೆ ವಿರೋಧ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೆ ಇವೆ.. ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಸರ್ಕಾರದ ಭವಿಷ್ಯವನ್ನು ನುಡಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಇರೋದು ಇನ್ನೂ 4 ತಿಂಗಳು ಮಾತ್ರ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನೊಣವಿಕೆರೆಯಲ್ಲಿ ಮಾತನಾಡಿ, ರಾಜ್ಯದ ಖಜಾನೆ ಖಾಲಿ ಮಾಡಿ ಕುಮಾರಸ್ವಾಮಿ ರಾಜೀನಾಮೆ ಕೊಟ್ಟರು ಎಂದು ಸುಳ್ಳು ಸುದ್ದಿ ಬಿತ್ತರವಾಗಿದೆ. ನಾನು ರಾಜೀನಾಮೆ ಕೊಡುವಾಗ ಅಂದಾಜು 6.5 ಸಾವಿರ ಕೋಟಿ ರೂ. ತೆರಿಗೆ ಹಣವನ್ನು ಖಜಾನೆಯಲ್ಲಿಟ್ಟು ಬಂದಿದ್ದೇನೆ ಎಂದು ತಿಳಿಸಿದರು.  ಉತ್ತರ ಕರ್ನಾಟಕದ ಜನರು ಮನೆ, ಆಹಾರ ಇಲ್ಲದೇ ಪಾಡು ಪಡುತ್ತಿದ್ದಾರೆ.  ಮೈತ್ರಿ ಸರ್ಕಾರ ಇದ್ದಾಗ ಈ ರೀತಿ ನೆರೆ ಪರಿಸ್ಥಿತಿ ಬಂದಿದ್ದರೆ ಮಾಧ್ಯಮದವರು ಕುಮಾರಸ್ವಾಮಿ ಎಲ್ಲಿದ್ದೀಯಪ್ಪ ಎಂದು ಟೀಕೆ ಮಾಡುತ್ತಿದ್ದರು.. . ಬಿಜೆಪಿ ಸರ್ಕಾರ ಪ್ರವಾಹ ಪೀಡಿತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದರೂ ಸುಮ್ಮನಿರುವುದೇಕೆ ಎಂದು ಮಾಧ್ಯಮವರಿಗೆ ಪ್ರಶ್ನೆ ಮಾಡಿದ್ದಾರೆ.. ಯಾವಾಗಲೂ ಮಾಧ್ಯಮದವರ ಮೇಲೆ ಕಿಡಿ ಕಾರುವ ಮಾಜಿ ಎಂ ಈ ಬಾರಿಯೂ ಕೂಡ ಮಾಧ್ಯಮದವರನ್ನು ಪ್ರಶ್ನೆ ಮಾಡಿದ್ದಾರೆ. ಉತ್ತರ ಕರ್ನಾಟಕ ಮಂದಿಗೆ ಯಾವ ರೀತಿಯಾಗಿಯೂ ಕೂಡ ರಾಜ್ಯ ಸರ್ಕಾರ ಸಹಾಯ ಮಾಡಿಲ್ಲ ಎಂದಿದ್ದಾರೆ.

Edited By

Manjula M

Reported By

Manjula M

Comments