ಅನರ್ಹ ಶಾಸಕರಾದ ಡಾ. ಸುಧಾಕರ್ ಗೆ ಮತ್ತೊಂದು ಬಿಗ್ ಶಾಕ್.?
ದೋಸ್ತಿ ಸರ್ಕಾರ ಪತನಗೊಳ್ಳಲು ಅತೃಪ್ತ ಶಾಸಕರೇ ಕಾರಣ. ಸದ್ಯ ಅತೃಪ್ತ ಶಾಸಕರನ್ನು ಅನರ್ಹಗೊಳಿಸಲಾಗಿತ್ತು..ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹ ಶಾಸಕರಲ್ಲಿ ಡಾ. ಸುಧಾಕರ್ ಕೂಡ ಒಬ್ಬರು.. ಅನರ್ಹಗೊಂಡ ನಂತರವು ಕೂಡ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಡಾ. ಸುಧಾಕರ್ ಮುಂದುವರೆದಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಸರ್ಕಾರ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಡಾ. ಸುಧಾಕರ್ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಬಳಿಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಇದಕ್ಕೆ ಅನುಮೋದನೆ ನೀಡಿದ್ದರು. ಇದೀಗ ಸುಧಾಕರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕವಾದ ಸಮಯದಲ್ಲಿಯೆ ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಇದನ್ನು ಇದನ್ನು ಪ್ರಶ್ನೆ ಮಾಡಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸುಧಾಕರ್ ನೇಮಕವಾಗಿರುವುದು ಕಾನೂನುಬಾಹಿರ ಎಂದು ಮೌಖಿಕವಾಗಿ ಹೈಕೋರ್ಟ್ ನ್ಯಾಯ ಮೂರ್ತಿಗಳು ಅಭಿಪ್ರಾಯಪಟ್ಟಿದ್ದು, ಒಂದು ವೇಳೆ ತೀರ್ಪು ಇದೇ ರೀತಿ ಹೊರಬಿದ್ದರೆ ಸುಧಾಕರ್ ತಮ್ಮ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಅನರ್ಹಗೊಂಡಿರುವ ಸುಧಾಕರ್ ಅವರಿಗೆ ಮತ್ತೊಂದು ಶಾಕ್ ಆದಂತೆ ಆಗಿದೆ.
Comments