ನೀಲಿ ಚಿತ್ರವನ್ನು ವಿಧಾನಸೌಧದ ಕಾರಿಡಾರ್ ನಲ್ಲಿ ಯಾವಾಗ ತೋರಿಸುತ್ತೀರಿ…?

ಬಿಜೆಪಿಯ ನಾಯಕ ಮಾಧುಸ್ವಾಮಿ ನೆನ್ನೆಯಷ್ಟೆ ಮಾತನಾಡುವಾಗ ಹೇಳಿಕೆಯೊಂದನ್ನು ನೀಡಿದ್ದರು.. ನೀಲಿ ಚಿತ್ರ ವೀಕ್ಷಣೆ ಅಪರಾಧವಲ್ಲ, ದೇಶದ್ರೋಹವೂ ಅಲ್ಲವೆಂದಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಇದೀಗ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿರುಗೇಟು ನೀಡಿದ್ದಾರೆ. ವಿಧಾನಸೌಧದ ಕಾರಿಡಾರ್ ನಲ್ಲಿ ನೀಲಿ ಚಿತ್ರವನ್ನು ಯಾವಾಗ ತೋರಿಸುತ್ತೀರಿ? ಎಂದು ಮಾಧುಸ್ವಾಮಿಯವರಿಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುವ ಸಮಯದಲ್ಲಿ ಉಗ್ರಪ್ಪ, ಮಾಧುಸ್ವಾಮಿ ಪ್ರಕಾರ ನೀಲಿ ಚಿತ್ರ ನೋಡುವುದು ಅಪರಾಧವಲ್ಲವಂತೆ. ಹಾಗಿದ್ದರೆ ವಿಧಾನಸೌಧದ ಕಾರಿಡಾರ್ ನಲ್ಲಿ ನೀಲಿ ಚಿತ್ರವನ್ನು ಯಾವಾಗ ತೋರಿಸ್ತೀರಿ ಹೇಳಿ. ಸದನದಲ್ಲಿ ನೀಲಿ ಚಿತ್ರ ನೋಡಿದ್ದಕ್ಕೆ ಈ ಹಿಂದೆ ಸಚಿವರಾಗಿದ್ದ ಸವದಿ, ಸಿ.ಸಿ.ಪಾಟೀಲ್, ಪಾಲೇಮಾರ್ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಬ್ಲೂ ಫಿಲಂ ನೋಡುವುದು ಅಪರಾಧವೆಲ್ಲವೆಂದಾದರೆ ಆಗ ಅವರಿಂದ ರಾಜೀನಾಮೆ ಪಡೆದಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ವಲಯದಲ್ಲಿ ಈ ರೀತಿಯ ಹೇಳಿಕೆಗಳು ಕೊಡುವುದು ಪ್ರಚೋದನೆ ಕೊಟ್ಟ ಆಗೆ ಆಗುತ್ತದೆ. ವಿರೋಧ ಪಕ್ಷಗಳ ವಾದ ಪ್ರತಿವಾದಗಳ ನಡುವೆ ಯಾವ ವಿಷಯವನ್ನು ಎಲ್ಲಿಯವರೆಗೆ ಕೊಂಡ್ಯೊಯುತ್ತದೆಯೋ ಗೊತ್ತಿಲ್ಲ… ಅವರ ಮೇಲೆ ಇವರು, ಇವರ ಮೇಲೆ ಆರೋಪಗಳನ್ನು ಮಾಡುತ್ತಲೆ ಇರುತ್ತಾರೆ.
Comments