ನನ್ನನ್ನು ಕೆಣಕಿದ್ರೆ ಕಚ್ಚೋದು ಗ್ಯಾರಂಟಿ ಎಂದ ಅನರ್ಹ ಶಾಸಕ..!!
ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.. ದೋಸ್ತಿ ಸರ್ಕಾರ ಪತನಗೊಂಡ ಮೇಲೆ ಬಿಜೆಪಿ ಸರ್ಕಾರ ಅಧಿಕಾರ ಬಂದಿದೆ.. ದೋಸ್ತಿ ಸರ್ಕಾರ ಪತನವಾಗುವುದಕ್ಕೆ ಅನರ್ಹ ಶಾಸಕರೇ ಕಾರಣ ಎಂಬ ವಿಷಯ ಎಲ್ಲರಿಗೂ ತಿಳಿದೆ ಇದೆ. ಸದ್ಯ ಅನರ್ಹ ಶಾಸಕರು ಅತಂತ್ರರಾಗಿದ್ದಾರೆ.. ಇದೀಗ ಅನರ್ಹ ಶಾಸಕರಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ತಮ್ಮ ವಿರೋಧಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಾನು ಮೊದಲೇ ನಾಗರಾಜ, ಕೆಣಕಿದ್ರೆ ಕಚ್ಚೋದು ಗ್ಯಾರಂಟಿ, ನನ್ನನ್ನು ಕೆಣಕಿದರೆ ನಾಗರಹಾವನ್ನು ಕೆಣಕಿದಂತೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೊಸಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಳಪೆ, ಕಲ್ಮಶ, ಸುಳ್ಳು ರಾಜಕೀಯದಿಂದ ಬೇಸರವಾಗಿದೆ. ದೊಡ್ಡವರ ಕಥೆ ಹೇಳಿದ್ರೆ ರಾಜಕೀಯ ಜೀವನ ಮುಗಿಯುತ್ತದೆ. ನಾನು ದೇವರು ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ನಾನು ಯಾರಿಗೂ ಭಯ ಬೀಳುವುದಿಲ್ಲ ಎಂದು ತಿಳಿಸಿದರು..ಇನ್ನು ನಾನು ಐಟಿ ಇಲಾಖೆಗೆ ಭಯಬಿದ್ದು ರಾಜೀನಾಮೆ ನೀಡಿಲ್ಲ, ಕೆಲವರು ಲೂಟಿ ಮಾಡಿರುವ ದಾಖಲೆ ನನ್ನ ಬಳಿ ಇದೆ. ಹಲವು ಸಲ ಸಚಿವರಾದವರು ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಒಟ್ಟಿನಲ್ಲಿ ಒಬ್ಬರು ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಲೇ ಕಾಲ ಕಳೆದುಬಿಡುತ್ತಾರೆ.
Comments