ರಾಜ್ಯ ಸರ್ಕಾರದಿಂದ ಎಚ್.ಡಿ.ರೇವಣ್ಣಗೆ ಬಿಗ್ ಶಾಕ್ ..!!

30 Aug 2019 5:51 PM | Politics
868 Report

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆಯಿತು.. ಆಗಿನಿಂದಲೂ ಕೂಡ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇವೆ.. ಪ್ರತಿಪಕ್ಷಗಳು ಪರ ವಿರೋಧಗಳ ಬಗ್ಗೆ ಮಾತನಾಡುತ್ತಲೆ ಇರುತ್ತವೆ.. ಸದ್ಯ ಕೆಎಂಎಫ್ ಗೆ ನಾಳೆ ಚುನಾವಣೆ ನಡೆಯಲಿದೆ.. ಈ ಚುನಾವಣೆಯು ರಾಜಕೀಯ ಪ್ರತಿಷ್ಟೆಯ ಅಖಾಡವಾಗಿ ಪರಿಣಮಿಸಿದೆ.  ಇದೇ ಹಿನ್ನೆಲೆಯಲ್ಲಿ ಕೆಎಂಎಫ್ ನಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಎಚ್.ಡಿ.ರೇವಣ್ಣ ವಿರುದ್ಧ  ಕೆಎಂಎಫ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಬಾಲಚಂದ್ರ ಜಾರಕಿಹೊಳಿ ಹೊಸ ಫ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ.. ಆ ಪ್ಲ್ಯಾನ್ ಅಂತೆಯೇ  ಕೆಎಂಎಫ್ ನ 11 ಮಂದಿ ನಿರ್ದೇಶಕರನ್ನು ಮುಂಬೈನ ಹೊಟೇಲ್ ಗೆ ಶಿಫ್ಟ್ ಮಾಡಿದ್ದಾರೆ. ಈ ಬೆನ್ನಲ್ಲೇ ರೇವಣ್ಣ ಅವರಿಗೆ ಶಾಕ್ ಕಾದಿದೆ. ಹಾಸನ ಹಾಲು ಒಕ್ಕೂಟವನ್ನು ಬೇರ್ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಸನ ಹಾಲು ಒಕ್ಕೂಟ ವಿಭಜನೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಇವೆಲ್ಲಾವನ್ನು ನೋಡುತ್ತಿರುವ ಕೆಲವು ಶಾಸಕರು ಸಚಿವರು ಇದನ್ನೆಲ್ಲಾ ಬಿಜೆಪಿ ಸರ್ಕಾರ ಬೇಕು ಬೇಕಂತಲೇ ಮಾಡುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

Edited By

Manjula M

Reported By

Manjula M

Comments