ಟ್ರಬಲ್ ಶೂಟರ್ ಡಿಕೆಶಿ ಗೆ ಶುರುವಾಯ್ತು ಬಂಧನದ ಭೀತಿ..!!
ಮಾಜಿ ಸಚಿವ, ಕಾಂಗ್ರೆಸ್ ನಾಯಕ, ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.. ಡಿಕೆಶಿ ಅವರು ನೀಡಿದ್ದ ಮಧ್ಯಂತರ ಜಾಮೀನು ಅರ್ಜಿಯವನ್ನು ಹೈಕೋರ್ಟ್ ವಜಾ ಮಾಡಿದೆ. ಇದೇ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಶುರುವಾಗಿದೆ.. ಡಿ.ಕೆ.ಶಿವಕುಮಾರ್ ಅವರ ಮಧ್ಯಂತರ ರಕ್ಷಣೆ ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್, ಡಿಕೆಶಿ ಬಂಧಿಸದಿದ್ದರೆ ಇಡಿ ಮುಂದೆ ಹಾಜರಾಗಲು ಒಪ್ಪಿದ್ದಾರೆ.
ಇಂದು ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ.ಶಿವಕುಮಾರ್ ಮಧ್ಯಂತರ ರಕ್ಷಣೆ ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ಪರ ವಕೀಲ ಬಿ.ವಿ ಆಚಾರ್ಯ ವಾದ ಮಂಡಿಸಿದ್ದು, ಮೇಲ್ಮನವಿ ಸಲ್ಲಿಸಲು ಸಮಯವಕಾಶ ಬೇಕು, ನಾವು ನಿರೀಕ್ಷಣಾ ಜಾಮೀನು ಕೇಳುತ್ತಿಲ್ಲ. ಮೇಲ್ಮನವಿ ಸಲ್ಲಿಸುವವರೆಗೂ ಬಂಧಿಸಬಾರದು ಎಂದು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಯ ಇ.ಡಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಗುರುವಾರ ರಾತ್ರಿ 9.40 ಕ್ಕೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
Comments