ನಿಖಿಲ್, ಪ್ರಜ್ವಲ್ ಆಯ್ತು ಇದೀಗ ದೇವೆಗೌಡರ ಪ್ಯಾಮಿಲಿಯ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿ..!!
ಈಗಾಗಲೇ ದೋಸ್ತಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಿದೆ..ದೋಸ್ತಿಯ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದೆ ಮೈತ್ರಿ ಸರ್ಕಾರ ಉರುಳಲು ಕಾರಣವಾಯಿತು..ಈಗ 17 ಶಾಸಕರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಉಪ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಸಿದ್ಧತೆಯನ್ನು ನಡೆಸುತ್ತಿವೆ.
ಈ ಬಾರಿ ಜೆಡಿಎಸ್ ಪಕ್ಷವು ಬೆಂಗಳೂರು ನಗರಕ್ಕೆ ಹೆಚ್ಚಿನ ಗಮನವನ್ನು ನೀಡಲಿದೆ. ಬೆಂಗಳೂರಿನ ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ದಲ್ಲಿ ಕಾಂಗ್ರೆಸ್ ಶಾಸಕರಿದ್ದರು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಶಾಸಕ ಗೋಪಾಲಯ್ಯ ಗೆಲುವನ್ನು ಸಾಧಿಸಿದ್ದರು.ಈ ಬಾರಿ ಬೆಂಗಳೂರಿನ ಜೊತೆಗೆ ಹುಣಸೂರು ಮತ್ತು ಕೆ.ಆರ್ ಪೇಟೆ ಕ್ಷೇತ್ರಗಳ ಕಡೆಗೂ ಗಮನವನ್ನು ನೀಡುತ್ತಿದ್ದಾರೆ. ಕುಟುಂಬ ರಾಜಕಾರಣ ಎಂದು ಹೇಳುತ್ತಿರುವಾಗಲೇ ಇದೀಗ ದೇವೇಗೌಡದ ಕುಟುಂಬದ ಮನೆಯಿಂದ ಮತ್ತೊಬ್ಬ ಅಭ್ಯರ್ಥಿ ರಾಜಕಾರಣಕ್ಕೆ ಪ್ರವೇಶಲಿದ್ದಾರೆ ಎನ್ನಲಾಗುತ್ತಿದೆ. ದೇವೇಗೌಡರ ಹಿರಿಯ ಪುತ್ರಿ ಅನಸೂಯಮಂಜುನಾಥ್ ಹೆಸರು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮತ್ತೆ ಕುಟುಂಬ ರಾಜಕಾರಣ ಎಂದು ಹೇಳುವವರ ಬಾಯಿಗೆ ಪದೆ ಪದೆ ಆಹಾರವಾಗುತ್ತಿದ್ದಾರೆ.
Comments