ಮೂವರು ಡಿಸಿಎಂಗಳಿಗೆ ಬಿಜೆಪಿ ಹೈಕಮಾಂಡ್ ಕೊಡ್ತು ಬಿಗ್ ಶಾಕ್ ..!
ಸದ್ಯ ರಾಜಕೀಯದಲ್ಲಿ ಏನು ನಡೆಯುತ್ತಿದೆ ಎಂಬ ಸ್ಪಷ್ಟ ಚಿತ್ರಣ ಸದ್ಯ ಯಾರಿಗೂ ಕೂಡ ಸಿಗುತ್ತಿಲ್ಲ…ಬಿಜೆಪಿ ಸರ್ಕಾರ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದಿದೆ.. ಒಂದು ತಿಂಗಳಿನಲ್ಲಿಯೇ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.. ಖಾತೆ ಹಂಚಿಕೆಯಲ್ಲಿಯೂ ಕೂಡ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿವೆ.. ಸಚಿವ ಸ್ಥಾನ ತಪ್ಪಿದ ಶಾಸಕರು ಬಿಜೆಪಿ ಪಕ್ಷದ ಮೇಲೆ ಕೆಂಡಾಮಂಡಲವಾಗಿದ್ದಾರೆ.
ಸದ್ಯ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಮೂವರು ಡಿಸಿಎಂಗಳನ್ನ ನೇಮಿಸಿದೆ. ಅದೇ ಹಿನ್ನಲೆಯಲ್ಲಿ ಇದೀಗ ಈ ಮೂವರಿಗೆ ಹೈಕಮಾಂಡ್ ಒಂದು ಶಾಕ್ ಕೂಡ ನೀಡಿದೆ.ರಾಜ್ಯಕ್ಕೆ ಮೂವರು ಡಿಸಿಎಂ ಆದ ಕಾರಣ ಜನರು, , ಮೂವರಿಗೂ ಜೀರೋ ಟ್ರಾಫಿಕ್ ಆಗುತ್ತೆ ಅಂತಾ ಅಸಮಾಧಾನ ಹೊರಹಾಕಿದ್ದರು. ಆದ್ರೆ ಮೂವರು ಡಿಸಿಎಂಗಳಿಗೆ ಜೀರೋ ಟ್ರಾಫಿಕ್ ತಗೋಬೇಡಿ ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ.ಜೀರೋ ಟ್ರಾಫಿಕ್‌ನಿಂದ ಟ್ರಾಫಿಕ್ ಸಮಸ್ಯೆ ಆಗಲಿದೆ. ಜನತೆಗೂ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ. ಹಾಗಾಗಿ ನೋ ಜೀರೋ ಟ್ರಾಫಿಕ್ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಒಟ್ಟಿನಲ್ಲಿ ಜನರ ಸಮಸ್ಯೆಗೆ ಬಿಜೆಪಿ ಹೈ ಕಮಾಂಡ್ ಸ್ಪಂದಿಸಿದೆ.
Comments