ಸಿಎಂ ಬಿಎಸ್ ವೈಗೆ ಶುರುವಾಯ್ತು ಹೊಸ ಟೆನ್ಷನ್..!
ಸಿಎಂ ಬಿಎಸ್ವೈ ಗೆ ಇದೀಗ ಹೊಸದೊಂದು ಟೆನ್ಷನ್ ಶುರುವಾಗಿದೆ… ದೋಸ್ತಿಗಳಿಗೆ ಕೈಕೊಟ್ಟು ಅನರ್ಹರಾಗಿದ್ದ ಶಾಸಕರಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿಯನ್ನು ನೀಡಿದೆ. ಇದೀಗ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಸಿಹಿಸುದ್ದಿ ನೀಡಿದ್ದು, ಅನರ್ಹತೆಯ ಬಗ್ಗೆ ಪ್ರಶ್ನೆ ಮಾಡಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಇರುವ ಟೆನ್ಷನ್ ಗಳ ಜೊತೆಗೆ ಮತ್ತೊಂದು ಹೊಸ ಟೆನ್ಷನ್ ಪ್ರಾರಂಭವಾಗಿದೆ.
ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ, ನ್ಯಾ. ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿದ್ದರು. ಇದೀಗ ಅನರ್ಹ ಶಾಸಕರ ತುರ್ತು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಈ ಮೂಲಕ ಬಿಎಸ್ ವೈ ಸರ್ಕಾರದಲ್ಲಿ ಸಚಿವ ಸ್ಥಾನದ ಕನಸು ಕಂಡಿದ್ದ ಅನರ್ಹ ಶಾಸಕರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಇದೀಗ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಬಿಎಸ್ ವೈ ಸರ್ಕಾರದಲ್ಲಿ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದ ಅನರ್ಹ ಶಾಸಕರ ಪರ ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬಂದರೆ ಮತ್ತೊಂದು ಪ್ರಮುಖ ಖಾತೆ ಹಾಗೂ ಡಿಸಿಎಂ ಹುದ್ದೆಗಳಿಗೆ ಅನರ್ಹ ಶಾಸಕರು ಬೇಡಿಕೆ ಇಡುವ ಸಾಧ್ಯತೆ ಇದೆ. ಈ ಸಮಸ್ಯೆಗಳನ್ನೆಲ್ಲಾ ಸಿಎಂ ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬುದೇ ಕುತೂಹಲದ ವಿಷಯ.. ಒಂದು ವೇಳೆ ಅನರ್ಹ ಶಾಸಕರನ್ನು ಕಡೆಗಣಿಸಿದರೆ ಮುಂದೆ ಯಾವ ರೀತಿಯ ತೊಂದರೆ ಎದುರಾಗುತ್ತದೆ ಎಂಬುದೆ ರಾಜಕೀಯದ ಸದ್ಯದ ವಿಷಯ.
Comments