ಬಿಜೆಪಿ ಗೆ ಬಿಗ್ ಶಾಕ್..!! ಖಾತೆ ಹಂಚಿಕೆಯ ಬೆನ್ನಲೇ ಇಬ್ಬರು ಸಚಿವರ ರಾಜೀನಾಮೆ..!?
ಬಿಎಸ್ ವೈ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದಿದೆ.. ಇತ್ತಿಚಿಗಷ್ಟೆ ಸಚಿವ ಸಂಪುಟ ಕೂಡ ವಿಸ್ತರಣೆಯಾಗಿದೆ.. ಖಾತೆಗಳು ಕೂಡ ಹಂಚಿಕೆಯಾಗಿವೆ.. ಒಂದು ಕಡೆ ಸಚಿವ ಸ್ಥಾನ ಸಿಗದೆ ಇದ್ದ ಕಾರಣ ಕೆಲವು ಶಾಸಕರು ಬಿಎಸ್ ವೈ ಮೇಲೆ ಗರಂ ಆಗಿದ್ದಾರೆ. ಆದರೆ ಇದೆಲ್ಲದರ ನಡುವೆ ತಮಗೆ ಸೂಕ್ತವಾದ ಸ್ಥಾನಮಾನವನ್ನು ನೀಡಿಲ್ಲ ಎನ್ನುವ ಕಾರಣಕ್ಕಾಗಿ ಸಚಿವ ಸಿಟಿ ರವಿ ಹಾಗೂ ಬಿ.ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿ.ಟಿ ರವಿಯವರು ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು, ಆದರೆ ಈಗ ಅವರಿಗೆ ಪ್ರವಾಸದ್ಯೋಮ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಸಚಿವ ಸ್ಥಾನ ನೀಡಿರುವುದರಿಂದ ಬೇಸರವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಈ ವಿಷಯದ ಬಗ್ಗೆ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿರುವ ಸಿ.ಟಿ.ರವಿ, ಇಂದು ನಡೆಯುವ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುತ್ತೇವೆ. ಪಕ್ಷ ನನಗೆ ಹತ್ತಾರು ಜವಾಬ್ದಾರಿ ಕೊಟ್ಟಿದೆ. ನಾನು ಬಂಡಾಯಗಾರನಲ್ಲ. ಸ್ವಾಭಿಮಾನಿ, ನಾನು ಯಾವತ್ತೂ ಪಕ್ಷ ನಿಷ್ಠೆ ಬಿಟ್ಟು ನಡೆದುಕೊಂಡಿಲ್ಲ. ಮಂತ್ರಿಯಾಗಬೇಕೆಂದು ಯಾರಲ್ಲೂ ಕೇಳಿಲ್ಲ. ಕೆಲವು ಸಂಗತಿಯನ್ನು ಕಾಲವೇ ನಿರ್ಣಯಿಸುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಖಾತೆ ಹಂಚಿಕೆ ವಿಷಯದಲ್ಲಿ ಕೆಲವು ಸಚಿವರು ಬೇಸರ ವ್ಯಕ್ತ ಪಡಿಸಿದ್ದು ನಿಜಕ್ಕೂ ರಾಜೀನಾಮೆ ನೀಡ್ತಾರ ಅಥವಾ ಕೂತು ಗೊಂದಲಗಳಿಗೆ ಪರಿಹಾರ ಹುಡುಕುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments