ಮೈತ್ರಿ ಪತನ ಹಿನ್ನಲೆ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಯಾವ ಪಕ್ಷ ಸೇರಿಕೊಳ್ಳುತ್ತಿದ್ದಾರೆ ಗೊತ್ತಾ..!?

ಸದ್ಯ ಮೈತ್ರಿ ಸರ್ಕಾರ ಪತನವಾದ ಮೇಲೆ ಸಾಕಷ್ಟು ಬದಲಾವಣೆ ರಾಜಕೀಯದಲ್ಲಿ ಕಾಣಿಸುತ್ತಿವೆ.. ಆರೋಪಗಳು ಪ್ರತ್ಯಾರೋಪಗಳು ಹೀಗೆ ಒಬ್ಬರ ಮೇಲೋಬ್ಬರು ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೆಲ್ಲದರ ನಡುವೆ ಮಂಡ್ಯ ಸಂಸದೆ ಸುಮಲತಾ ಬಗ್ಗೆಯೂ ಕೂಡ ಒಂದಿಷ್ಟು ವಿಚಾರಗಳು ನಡೆಯುತ್ತಿವೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ದು, ಈ ನಡುವೆ ಸುಮಲತಾ ಅಂಬರೀಶ್ ಅವರು ತಮ್ಮ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೌದು…ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಬಿಜೆಪಿ ನಿಂತಿತ್ತು. ಆದರೆ ಮಂಡ್ಯದಲ್ಲಿ ಇನ್ನೂ ಬಿಜೆಪಿ ಸರಿಯಾಗಿ ನೆಲೆ ಕಾಣದ ನಿಟ್ಟಿನಲ್ಲಿ ತಮ್ಮ ಹಾಗೂ ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ರಾಜಕೀಯ ಭವಿಷ್ಯದಿಂದಾಗಿ ಅಲ್ಲದೇ ತಮ್ಮ ಪತಿ ದಿ.ಅಂಬರೀಶ್ ಅವರು ಇದ್ದ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುವುದಕ್ಕೆ ಸುಮಲತಾ ಅವರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದಷ್ಟೆ ಅಲ್ಲದೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಅಭಿಷೇಕ್ ಕೂಡ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದ್ದು, ಈ ಎಲ್ಲ ನಿಟ್ಟಿನಲ್ಲಿ ಸುಮಲತಾ ಅವರು ಕಾಂಗ್ರೆಸ್‌ನ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸುಮಲತಾ ಅವರೇ ಅಧಿಕೃತವಾಗಿ ಘೋಷಣೆಯನ್ನು ಮಾಡಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ನಿಖಿಲ್ ಗೆ ಭರ್ಜರಿ ಪೈಟ್ ಕೊಟ್ಟು ಸ್ವಾಭಿಮಾನದ ರಣ ಕಹಳೆಯನ್ನು ಗೆಲುವನ್ನು ಸಾಧಿಸಿದ್ದರು.. ಇದೀಗ ಮಗನ ಭವಿಷ್ಯದ ಬಗ್ಗೆಯೂ ಕೂಡ ಚಿಂತೆಯನ್ನು ಮಾಡುತ್ತಿದ್ಧಾರೆ ಎನ್ನಲಾಗಿದೆ.
Comments