ಮುನಿರತ್ನ ಬಿಜೆಪಿ ಸೇರ್ಪಡೆಗೆ ವಿರೋಧ..! ಯಾರಿಂದ ಗೊತ್ತಾ..?
ದೋಸ್ತಿಗಳಿಗೆ ಕೈ ಕೊಟ್ಟು ಸದ್ಯ ಅನರ್ಹರ ಸಾಲಿನಲ್ಲಿ ನಿಂತಿರುವ ಶಾಸಕರಲ್ಲಿ ಮುನಿರತ್ನ ಕೂಡ ಒಬ್ಬರು.. ದೋಸ್ತಿ ಸರ್ಕಾರ ಪತನಗೊಳ್ಳಲು ಇವರು ಕೂಡ ಕಾರಣನೇ.. ಕಾಂಗ್ರೆಸ್ ಅನರ್ಹ ಶಾಸಕ ಮುನಿರತ್ನ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಮುಖಂಡರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜ್ಞಾನಭಾರತಿ ವಾರ್ಡ್ ಅಧ್ಯಕ್ಷ ಎಂ.ಆರ್.ಕುಮಾರ್ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎನ್ನಲಾಗಿದೆ..
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜ್ಞಾನಭಾರತಿ ವಾರ್ಡ್ ಅಧ್ಯಕ್ಷ ಎಂ.ಆರ್. ಕುಮಾರ್ ಅವರನ್ನು ಉಚ್ಛಾಟನೆ ಮಾಡಿ ಎಂದು ರಾಜರಾಜೇಶ್ವರಿ ನಗರ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಜ್ಞಾನ ಭಾರತಿ ವಾರ್ಡ್ ಬಿಜೆಪಿ ಅಧ್ಯಕ್ಷ ಎಂ.ಆರ್. ಕುಮಾರ್ ಅವರು ಮುನಿರತ್ನ ಬಿಜೆಪಿ ಸೇರ್ಪಡೆಗೆ ವಿರೋಧಿಸಿ ಪತ್ರ ಬರೆದಿದ್ದರು. ಹೀಗಾಗಿ ಆರ್.ಆರ್ ನಗರ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್ ರೆಡ್ಡಿ ಅವರು ಪಕ್ಷ ವಿರೋಧ ಚಟುವಟಿಕೆ ಹಿನ್ನೆಲೆಯಲ್ಲಿ ಎಂ.ಆರ್. ಕುಮಾರ್ ಅವರಿಗೆ 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಟ್ಟಾರೆಯಾಗಿ ರಾಜಕೀಯ ಒಂದು ರೀತಿ ದೊಂಬರಾಟ ಇದ್ದ ಹಾಗೆ.. ಅಷ್ಟೆ ಅಲ್ಲದೆ ಇಂದು ಈ ಪಕ್ಷದಲ್ಲಿ ಇದ್ದವರು ನಾಳೆಯನ್ನುವಷ್ಟರಲ್ಲಿ ಬೇರೆ ಪಕ್ಷಕ್ಕೆ ಜಿಗಿದಿರುತ್ತಾರೆ. ಹೀಗೆ ಆದರೆ ನಮ್ಮ ಸರ್ಕಾರದ ಗತಿ ಏನಾಗುತ್ತದೆ ಎಂಬುದೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
Comments