ಬ್ಲೂ ಫಿಲ್ಮ್ ನೋಡಿದವರಿಗೆ ಸಚಿವ ಸ್ಥಾನ..!!! ಬಿಜೆಪಿಯಲ್ಲೇ ಬುಗಿಲೆದ್ದ ಆಕ್ರೋಶ..!!
ನೆನ್ನೆಯಷ್ಟೆ ಸಚಿವ ಸಂಪುಟ ವಿಸ್ತರಣೆಯಾಗಿದೆ.. ಸಂಪುಟ ವಿಸ್ತರಣೆಯಾಗಿ ಇನ್ನೂ ಒಂದು ದಿನ ಕೂಡ ಕಳೆದಿಲ್ಲ… ಆಗಲೇ ಲಕ್ಷದಲ್ಲಿ ಸಾಕಷ್ಟು ಅಸಮಾಧಾನಗಳು ಬುಗಿಲೆದ್ದಿವೆ.. ಇದೀಗ ಸಚಿವ ಸ್ಥಾನವನ್ನು ಕೊಟ್ಟಿರೊದ್ದಕ್ಕೆ ಕೆಲವರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.. ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದವರಿಗೆ ಸರಿಯಾದ ಸ್ಥಾನ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ..
ಅದಷ್ಟೆ ಅಲ್ಲದೇ ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದ ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ಗೆ ಈ ಬಾರಿಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ರಾಜ್ಯ ಬಿಜೆಪಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಶಾಸಕನೇ ಅಲ್ಲದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವ ವಿಚಾರದಲ್ಲೂ ಟೀಕೆಗಳು ವ್ಯಕ್ತವಾಗುತ್ತಿವೆ.. ಮತದಾರರೇ ತಿರಸ್ಕರಿಸಿರುವ, ಬ್ಲೂ ಫಿಲ್ಮ್ ನೋಡಿರುವ ವ್ಯಕ್ತಿಗೆ ಪದವಿ ನೀಡಿರುವುದು ಅಂಥ ದಂಧೆಯವರಿಗೆ ಉತ್ತೇಜನ ಕೊಟ್ಟಂತಲ್ಲವೇ? ರಾಜ್ಯದ ಹಿರಿಯ ಬಿಜೆಪಿ ಶಾಸಕರಾಗಿರುವ ಜೊತೆಗೆ ಜಿಲ್ಲೆಗೊಂದು ಉಸ್ತುವಾರಿ ಸಚಿವರಾಗಬೇಕಾದ ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ್ದ ಅಂಗಾರ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಬಿಜೆಪಿ ವಲಯದಲ್ಲೂ ಮಂತ್ರಿ ಸ್ಥಾನದ ಬಗ್ಗೆ ವಿಶ್ವಾಸದ ಮಾತು ಕೇಳಿ ಬಂದಿತ್ತು ಆದರೆ ಈ ಬಾರಿ ಕೂಡ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಸುಳ್ಯದಲ್ಲಿ ಬಿಜೆಪಿಯ ನಾಯಕರುಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಶಾಸಕರು ಲಾಭಿ ನಡೆಸುತ್ತಿದ್ದರು.. ಆದರೆ ಯಾರು ಅಂದುಕೊಂಡಂತೆ ಈ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ… ಹಾಗಾಗಿ ಬಿಜೆಪಿ ನಾಯಕರು ಬೇಸರಗೊಂಡಿದ್ದಾರೆ. ಬಿಜೆಪಿ ಮೇಲೆ ಬೇಸರಗೊಂಡವರು ಪಕ್ಷಕ್ಕೆ ರಾಜೀನಾಮೆ ಕೊಟ್ಟರು ಕೂಡ ಆಶ್ಚರ್ಯ ಇಲ್ಲ..
Comments