ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಬೆಚ್ಚಿಬಿದ್ದ ಬಿಜೆಪಿ..!! ಅವರು ಹೇಳಿದ್ದೇನು..?
ನೆನ್ನೆಯಷ್ಟೆ ಸಚಿವ ಸಂಪುಟ ವಿಸ್ತರಣೆಯು ನಡೆದಿದೆ… ಸಚಿವ ಸ್ಥಾನ ತಪ್ಪಿದ್ದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ.. ಕೆಲ ಶಾಸಕರ ಆಕ್ರೋಶ ಹೆಚ್ಚಾಗಿಯೇ ಇದೆ… ಅತೃಪ್ತ ಶಾಸಕರು ಇದೀಗ ಒಬ್ಬೊಬ್ಬರೆ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.. ಇದೀಗ ಶಾಸಕ ಬಾಲಚಂದ್ರ ಜಾರಕಿಹೊಳಿ ನೀಡಿರುವ ಹೇಳಿಕೆಯೊಂದು ಬಿಜೆಪಿ ನಾಯಕರಿಗೆ ಶಾಕ್ ನೀಡಿದಂತಾಗಿದೆ..
ಶಾಸಕರಲ್ಲದಿದ್ದರೂ ಲಕ್ಷ್ಮಣ್ ಸವದಿಯವರನ್ನು ಮಂತ್ರಿ ಮಾಡಿರುವುದು ಬೆಳಗಾವಿ ಭಾಗದ ಶಾಸಕರುಗಳಲ್ಲಿ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿದೆ… ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ರಾಜ್ಯ ರಾಜಕಾರಣದ ಬೆಳವಣಿಗೆಯಲ್ಲಿ ಬೆಳಗಾವಿ ಜಿಲ್ಲೆ ಪ್ರಮುಖ ಪಾತ್ರ ವಹಿಸಿದ್ದು, ಅಲ್ಲಿ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಕುಟುಂಬ ಹೀಗೆ ಮೂರು ಬಣಗಳಿರುವುದನ್ನು ಬಾಲಚಂದ್ರ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ತಮ್ಮ ತಮ್ಮಲ್ಲಿಯೇ ಅಸಮಾಧಾನಗಳನ್ನು ಇಟ್ಟುಕೊಂಡಿರುವವರು ಇನ್ನೂ ರಾಜಕೀಯದಲ್ಲಿ ಯಾವ ರೀತಿಯ ಅಸಮಾಧಾನವನ್ನು ಇಟ್ಟುಕೊಂಡಿರುತ್ತಾರೋ ಗೊತ್ತಿಲ್ಲ.. ಹೀಗೆ ಆದರೆ ನಮ್ಮ ರಾಜಕೀಯ ಸ್ಥಿತಿ ಎಲ್ಲಿಗೆ ಬಂದು ತಲುಪುತ್ತದೆಯೋ ಗೊತ್ತಿಲ್ಲ..
Comments