ಬಿಎಸ್’ವೈ ಸರ್ಕಾರ ಇನ್ನೂ 6 ತಿಂಗಳು ಇರುತ್ತಂತೆ..!! ಭವಿಷ್ಯ ನುಡಿದ ‘ಕೈ’ ಶಾಸಕ..!!!
ಸದ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದ ಸಚಿವ ಸಂಪುಟಕ್ಕೆ ಇಂದು ತೆರೆ ಬಿದಿದ್ದೆ.. 17 ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.. ಸಚಿವ ಸ್ಥಾನ ಸಿಕ್ಕಿರುವ ಖುಷಿಯಲ್ಲಿ ಕೆಲವರು ಇದ್ದರೆ ಮತ್ತೆ ಕೆಲವರು ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈಗಿರುವಾಗಲೇ ಸರ್ಕಾರದ ಭವಿಷ್ಯವನ್ನು ತಿಳಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಕೇವಲ 6 ತಿಂಗಳು ಮಾತ್ರ ಇರುತ್ತದೆ.. ಎಂದು ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಭವಿಷ್ಯವನ್ನು ನುಡಿದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಕೊಪ್ಪಳದಲ್ಲಿ ಮಾತನಾಡಿದ ಅಮರೇಗೌಡ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೇವಲ 6 ತಿಂಗಳು ಮಾತ್ರ ಇರುತ್ತೆ. ಬಿಜೆಪಿಯವರು ಲೂಟಿ ಮಾಡಿ ಮನೆಗೆ ಹೋಗ್ತಾರೆ, ಅಥವಾ ಅವರೇ ಬಡಿದಾಡಿಕೊಂಡು ಮನೆಗೆ ಹೋಗ್ತಾರೆ ಎಂದು ತಿಳಿಸಿದ್ದಾರೆ.. ಬೆಳಗಾವಿಯವರು ಇದೀಗ ಪ್ರಾರಂಭ ಮಾಡಿದ್ದಾರೆ. ಅವರೇ ಕೊನೆ ಮಾಡುತ್ತಾರೆ ಇಂದು ಸಂಜೆ ಒಳಗೆ ಏನೆಲ್ಲಾ ಆಗುತ್ತೆ ಎನ್ನುವುದನ್ನು ನೋಡಿ ಎಂದು ಬಿಜೆಪಿ ಸರ್ಕಾರದ ಆಯುಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಒಟ್ಟಾರೆಯಾಗಿ ರಾಜ್ಯ ರಾಜಕೀಯದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
Comments