ರಾಜೀನಾಮೆ ನೀಡಿ ಕೆಟ್ಟರಾ ಮಹೇಶ್ ಕುಮಟಳ್ಳಿ..?

ಸದ್ಯ ಇಂದು ಬಿಎಸ್ವೈ ಸಚಿವ ಸಂಪುಟ ವಿಸ್ತರಣೆಗೆ ತೆರೆ ಬಿದ್ದಿದೆ.. ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ.. ಮತ್ತೆ ಕೆಲವರಿಗೆ ಸಚಿವ ಸ್ಥಾನ ಕೈ ತಪ್ಪಿದೆ.. ಇದರಿಂದ ಸಾಕಷ್ಟು ಶಾಸಕರು ನಿರಾಶೆಯಾಗಿದ್ದಾರೆ.. ಅದರಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಮೀಸಲಿಡಲಾಗಿದೆ.
ಈಗಾಗಲೇ ಮೊದಲನೇಯ ಹಂತದಲ್ಲಿ 17 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಅನರ್ಹ ಶಾಸಕರೊಬ್ಬರಿಗೆ ಶಾಕ್ ನೀಡಲಾಗಿದೆ. ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ರಾಜೀನಾಮೆ ನೀಡಿ ಅನರ್ಹರಾಗಿದ್ದಾರೆ. ಅವರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಾಗಾಗಿ ಮಹೇಶ್ ಕುಮಟಳ್ಳಿ ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ.. ಅನರ್ಹರಾಗಿರುವ ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಮಾಜಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನು 6 ತಿಂಗಳೊಳಗೆ ಲಕ್ಷ್ಮಣ ಸವದಿ ವಿಧಾನಸಭೆ ಇಲ್ಲವೇ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕಿದೆ. ಹಾಗಾಗಿ ಇತ್ತ ದೋಸ್ತಿಗಳಿಗೆ ಕೈ ಕೊಟ್ಟ ಶಾಸಕರ ಸ್ಥಿತಿ ಅತಂತ್ರವಾಗಿದೆ.
Comments