ಸಿಎಂ `ಬಿಎಸ್ ವೈ' ಮನೆಗೆ ಬಂದ ಅನರ್ಹ ಶಾಸಕ..!! ಯಾರ್ ಗೊತ್ತಾ..?

19 Aug 2019 12:06 PM | Politics
1135 Report

ದೋಸ್ತಿ ಸರ್ಕಾರ ಪತನಾಗುವುದಕ್ಕೆ ಮುಖ್ಯವಾಗಿ ಅತೃಪ್ತ ಶಾಸಕರೇ ಕಾರಣ ಎಂಬುದು ಎಲ್ಲರಿಗೂ ಗೊತ್ತೆ ಇದೆ.. ಅತೃಪ್ತ ಶಾಸಕರಿಗೆ ದೋಸ್ತಿಗಳಿಗೆ ಕೈ ಕೊಟ್ಟ ಮೇಲೆ ದೋಸ್ತಿಗಳನ್ನು ಮನವೊಲಿಸುವಲ್ಲಿ ವಿಫಲರಾದರು.. ವಿಶ್ವಾಸಮತ ಯಾಚನೆ ಕೂಡ ಪಲಿಸಲಿಲ್ಲ… ಹಾಗಾಗಿ ದೋಸ್ತಿ ಸರ್ಕಾರ ಪತನಗೊಂಡು ಬಿಜೆಪಿ ಪಕ್ಷ ರಾಜ್ಯದ ಆಡಳಿತ ಪಕ್ಷವಾಯಿತು.. ಅತೃಪ್ತ ಶಾಸಕರ ನಡೆ ಇದೀಗ ಗೊಂದಲಮಯವಾಗಿದೆ… ಅತೃಪ್ತ ಶಾಸಕರು ಇದೀಗ ಅನರ್ಹ ಶಾಸಕರಾಗಿದ್ದಾರೆ..

ಅನರ್ಹ ಶಾಸಕರಲ್ಲಿ ಒಬ್ಬರಾದ ಮುನಿರತ್ನ ಅವರು ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ.  ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸಕ್ಕೆ ಮುನಿರತ್ನ ಭೇಟಿ ನೀಡಿದ್ದು, ಮುನಿರತ್ನ ಅವರು ಬರುವಷ್ಟರಲ್ಲಿ ಸಿಎಂ ಬಿಎಸ್. ಯಡಿಯೂರಪ್ಪ ವಿಧಾನಸೌಧಕ್ಕೆ ತೆರಳಿದ್ದಾರೆ. ಹೀಗಾಗಿ ಮುನಿರತ್ನ ಅವರು ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆ ಮುನಿರತ್ನ ಮಾತುಕತೆ ನಡೆಸಿದ್ದಾರೆ. ಸಂಪುಟದಲ್ಲಿ ಸ್ಥಾನಮಾನ ಬಗ್ಗೆ ಅನರ್ಹ ಶಾಸಕ ಮುನಿರತ್ನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಅನರ್ಹ ಶಾಸಕರ ಸ್ಥಿತಿ ಅತಂತ್ರವಾಗಿದೆ ಎನ್ನಬಹುದಾಗಿದೆ. ಮುಂದೆ ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ..

 

Edited By

Manjula M

Reported By

Manjula M

Comments