ನಾಳೆ ನೂತನ ಸಚಿವರ ಪ್ರಮಾಣ ವಚನ..!!! ಯಾರಿಗೆ ಯಾವ ಸ್ಥಾನ ಗೊತ್ತಾ..?

ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಸಚಿವ ಸಂಪುಟ ವಿಸ್ತರಣೆಗೆ ಅಂತೂ ಇಂತೂ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದೆ.. ನಾಳೆ ಅಂದರೆ ಮಂಗಳವಾರ ನೂತನ ಸಚಿವರು ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ ಎನ್ನಲಾಗಿದೆ… ಇಂದು ಸಂಜೆ ಬಿಜೆಪಿ ಹೈಕಮಾಂಡ್ ಸಚಿವರಾಗಲಿರುವವರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಕುತೂಹಲದ ವಿಷಯವೆಂದರೆ ಸಿಎಂ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ಸೇರ್ಪಡೆಯಾಗುವ ಶಾಸಕರು ಯಾರು ಎಂಬ ಮಾಹಿತಿಯೇ ಇಲ್ಲವಂತೆ.
ಹೌದು… ಹೀಗಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಬಿಡುಗಡೆ ಮಾಡಲಿರುವ ನೂತನ ಸಚಿವರ ಪಟ್ಟಿ, ಯಡಿಯೂರಪ್ಪ ಸೇರಿದಂತೆ ಎಲ್ಲರಲ್ಲಿಯೂ ಕೂಡ ಕುತೂಹಲವನ್ನು ಮೂಡಿಸಿದೆ. ಮೊದಲ ಹಂತದಲ್ಲಿ 13 ರಿಂದ 15 ಮಂದಿ ಸಚಿವರಾಗಲಿದ್ದಾರೆಂದು ಹೇಳಲಾಗುತ್ತಿದೆ. ಸಚಿವರ ಸ್ಥಾನಕ್ಕೆ ಸಾಕಷ್ಟು ಜನ ಲಾಬಿ ನಡೆಸುತ್ತಿದ್ದು ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸಚಿವರ ಪಟ್ಟಿಯ ಬಗ್ಗೆ ಅಮಿತ್ ಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಹೇಳಲಾಗಿದೆ. ಯಡಿಯೂರಪ್ಪ ಹಾಗೂ ಬಿ.ಎಲ್. ಸಂತೋಷ್ ನೀಡಿರುವ ಪಟ್ಟಿಗಳನ್ನು ಪರಿಶೀಲಿಸಿ ನೂತನ ಮಂತ್ರಿಗಳ ಕುರಿತು ಅಮಿತ್ ಶಾ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ನಾಳೆಯ ವೇಳೆಗೆ ಸಚಿವರು ಯಾರ್ಯಾರು ಎಂಬುದು ತಿಳಿಯುತ್ತದೆ..
Comments