ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಟೆಲಿಫೋನ್ ಕದ್ದಾಲಿಕೆ ಬಗ್ಗೆ ಹೇಳಿದ್ದೇನು ಗೊತ್ತಾ....?
ಸದ್ಯ ರಾಜಕೀಯ ವಲಯದಲ್ಲಿ ಪೋನ್ ಟ್ಯಾಪಿಂಗ್ ವಿಷಯ ಹೆಚ್ಚು ಚರ್ಚೆಯಾಗುತ್ತಿದೆ… ಚುನಾವಣೆಯ ಸಮಯದಲ್ಲಿ ಪೋನ್ ಟ್ಯಾಪಿಂಗ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಿಂದೆ ಇದ್ದ ಸರ್ಕಾರದ ಅವಧಿಯಲ್ಲಿ ಪೋನ್ ಕದ್ದಾಲಿಕೆ ನಡೆದಿದೆ ಎನ್ನಲಾಗುತ್ತಿದೆ.. ಈ ರೀತಿಯ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ… ಈ ಬಗ್ಗೆ ಮಾಜಿ ಸಚಿವ ಡಿ ಸಿ ತಮ್ಮಣ್ಣ ಮಾತನಾಡಿ ಪೋನ್ ಕದ್ದಾಲಿಕೆ ಆಗಿದ್ದರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿ ಸಿ ತಮ್ಮಣ್ಣನವರು ಈ ಹಿಂದೆ ಟೆಲಿಫೋನ್ ಕದ್ದಾಲಿಕೆ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಿಂದೆಯೂ ಕೇಂದ್ರ ಸರ್ಕಾರ ಕೂಡ ಫೋನ್ ಟ್ಯಾಪಿಂಗ್ ನಡೆಸಿತ್ತು ಎಂದು ತಿಳಿಸಿದ್ದಾರೆ.. ಇನ್ನು ಪ್ರವಾಹದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ತಮ್ಮ ಡಿ.ಸಿ.ತಮ್ಮಣ್ಣ ಸೇವಾ ಪ್ರತಿಷ್ಟಾನದಿಂದ ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.. ಅಷ್ಟೆ ಅಲ್ಲದೆ ನೆರೆ ಸಂತ್ರಸ್ತರ ಸಹಾಯಕ್ಕೆ ಹೆಚ್ಚಿನ ನೆರವನ್ನು ನೀಡಬೇಕು ಎಂದು ತಿಳಿಸಿದರು. ಸದ್ಯ ರಾಜಕಾರಣಿಗಳೆಲ್ಲಾ ಉತ್ತರ ಕರ್ನಾಟಕದ ಜನತೆಯ ಸಹಾಯಕ್ಕೆ ನಿಂತಿದ್ದಾರೆ..
Comments