ತಮ್ಮ `ಲಕ್ಕಿ ರೂಂ' ಖಾಲಿ ಮಾಡಿದ ಮಾಜಿ CM HDK..!!

ಸದ್ಯ ರಾಜಕೀಯವಲಯದಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಲ್ಲಿವೆ… ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಸದ್ಯ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಅದೃಷ್ಟದ ರೂಮ್ ಅನ್ನು ಖಾಲಿ ಮಾಡಿದ್ದಾರೆ.. ದೋಸ್ತಿ ಸರ್ಕಾರವು ಪತನಗೊಂಡ ಮೇಲೆ ಮುಖ್ಯಮಂತ್ರಿ ಹುದ್ದೆಗೆ ಕುಮಾರಸ್ವಾಮಿಯವರು ರಾಜೀನಾಮೆ ಕೊಟ್ಟ ಮೇಲಿಯು ಕೂಡ ಉತ್ತರ ಕರ್ನಾಟಕದ ಜನತೆಯ ನೋವಿಗೆ ಸ್ಪಂದಿಸಿಸುತ್ತಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಅದೃಷ್ಟದ ರೂಂ ಖಾಲಿ ಮಾಡಿ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಳ್ಳುವುದಕ್ಕೆ ಬಿಜೆಪಿ ಟೀಕೆ ಮಾಡಿತ್ತು. ಆಗ ಹೆಚ್ಡಿಕೆ, ನಾನು ಗುಡಿಸಲಿನಲ್ಲಿ ಕೂಡ ಬದುಕಬಲ್ಲೆ… ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ರೂಂ ಮಾಡಿರುವುದು ವ್ಯಾಪಾರಕ್ಕಲ್ಲ. ಅದು ಅದೃಷ್ಟದ ರೂಂ, ಹೀಗಾಗಿ ನಾನು ಅಲ್ಲಿ ಕುಳಿತುಕೊಳ್ಳಲು ಇಚ್ಚಿಸುತ್ತೇನೆ ಎಂದು ತಿಳಿಸಿದ್ದರು.. ಇದೀಗ ಅವರು ತಮ್ಮ ಅದೃಷ್ಟದ ರೂಂ ಅನ್ನು ಖಾಲಿ ಮಾಡಿದ್ದಾರೆ.
Comments