ಬಿಜೆಪಿಗೆ ಬಿಗ್ ಶಾಕ್..!! ಸರ್ಕಾರ ಕೆಡುವುತ್ತೇನೆ ಎಂದು ಖಡಕ್ ವಾರ್ನಿಂಗ್ ಕೊಟ್ಟ ಶಾಸಕ..!!!
ಸದ್ಯ ರಾಜ್ಯ ರಾಜಕಾರಣದಲ್ಲಿ ಏನೇನು ಬದಲಾವಣೆಯಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ… ದೋಸ್ತಿಗಳಿಗೆ ಕೈಕೊಟ್ಟ ಅತೃಪ್ತ ಶಾಸಕರು ಅನರ್ಹರಾಗಿದ್ದಾರೆ.. ಮತ್ತೊಂದು ಕಡೆ ಬಿಜೆಪಿಯವರ ಲೆಕ್ಕಾಚಾರ ಉಲ್ಟವಾಗುತ್ತಿದೆ.. ಸಚಿವ ಸಂಪುಟ ರಚನೆ ಮಾಡಬೇಕು ಎಂದುಕೊಂಡಿದ್ದ ಅವರಿಗೆ ಇದೀಗ ಉತ್ತರ ಕರ್ನಾಟಕ ಪ್ರವಾಹದಿಂದಾಗಿ ಎಲ್ಲವನ್ನೂ ಕೂಡ ಮುಂದೂಡಲಾಗಿದೆ.. ಇದೇ ಹಿನ್ನಲೆಯಲ್ಲಿಯೇ ಬಿಜೆಪಿ ಶಾಸಕ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ರಾಜ್ಯ ಸರಕಾರವನ್ನು ಕೆಡವುತ್ತೇನೆ ಅಂತ ಹೇಳುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ. ಅರಭಾವಿ ಕ್ಷೇತ್ರದಲ್ಲಿ ನೆರೆ ಪೀಡಿತರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರಕಾರವನ್ನೇ ಕೆಡವುತ್ತೇನೆ. ನಿಮಗೆಲ್ಲರಿಗೂ ಮನೆ ಕಟ್ಟಿಸಿ ಕೊಡುವೆ ಅಂತ ಭರವಸೆಯನ್ನು ಕೂಡ ನೀಡಿದ್ದಾರೆ. ಸರಕಾರವನ್ನು ಬೀಳಿಸುವ ಶಕ್ತಿ ನನಗಿದೆ. ಹೀಗಾಗಿ ಸರಕಾರ ಮನೆ ಕಟ್ಟಿಸಿಕೊಡದಿದ್ದರೆ ಈ ಸರಕಾರವನ್ನೇ ಉರುಳಿಸುತ್ತೇನೆ ಅಂತ ಬಿ.ಎಸ್.ಯಡಿಯೂರಪ್ಪನವರಿಗೆ ಬಾಲಚಂದ್ರ ಜಾರಕಿಹೋಳಿ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸದ್ಯ ಬಾಲಚಂದ್ರ ಜಾರಕಿಹೊಳಿಯ ಈ ಹೇಳಿಕೆಯಿಂದ ಬಿಜೆಪಿಯು ಪೇಚಿಗೆ ಸಿಲುಕಿಕೊಂಡಿದೆ…ಮುಂದೆ ಈ ಸರ್ಕಾರಕ್ಕೂ ಗಂಡಾಂತರ ಬಂದರೂ ಕೂಡ ಬರಬಹುದು..
Comments