ದೇವೇಗೌಡರ ಕುಟುಂಬಕ್ಕೆ ಕಾರ್ಕೋಟಕ ವಿಷ ಹಾಕಿದ್ದು ನಾನೇ ಎಂದ ಮಾಜಿ ಸಚಿವ..!!

ಅಂದಹಾಗೆ ರಾಜ್ಯದಲ್ಲಿ ಇದ್ದ ಮೈತ್ರಿ ಸರ್ಕಾರ ಸದ್ಯ ಪತನವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಮೈತ್ರಿಗಳನ್ನ ಸೋಲಿಸಿದ್ದಕ್ಕೆ ಬಿಎಸ್ ವೈ ಸರ್ಕಾರ ಸದ್ಯ ಖುಷಿಯಲ್ಲಿದೆ.. ಇದರ ನಡುವೆ ಇದೀಗ ಮತ್ತೊಂದು ವಿಷಯ ಚರ್ಚೆಯಲ್ಲಿದೆ.. ದೇವೆಗೌಡರ ಕುಟುಂಬಕ್ಕೆ ಹಾಗೂ ಜೆಡಿಎಸ್ ಎಂಬ ಪಕ್ಷಕ್ಕೆ ವಿಷ ಹಾಕಿದ್ದು ನಾನೇ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸದ್ದಾರೆ.. ಅಷ್ಟೆ ಅಲ್ಲದೆ ಆ ಕಾರ್ಕೋಟಕ ವಿಷದ ಹೆಸರು ವಿಶ್ವನಾಥ್ ಎಂದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಈ ವಿಷಯವನ್ನು ತಿಳಿಸಿದರು. ಇದೇ ವೇಳೆ ಅವರು ಸದನದಲ್ಲಿ ನಾನು ಅವರ ವಿರುದ್ಧ ಮಾತಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ಅವರ ಜೊತೆ ಚರ್ಚೆಗೆ ಬರಲು, ದೇವಸ್ಥಾನಕ್ಕೆ ಹೋಗಲು ನಾನು ಸದಾ ಸಿದ್ಧ. ಅವರ ಜೊತೆಯೇ ಕೂತು ಅವರ ಇನ್ನಷ್ಟು ಚರಿತ್ರೆ ಬಿಚ್ಚಿಡುತ್ತೇನೆ. ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಿ ಕೊಡಿ ಎಂದು ವಿಶ್ವನಾಥ್, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿ ಕೇಳಿದರೋ, ಇಲ್ಲವೋ ಅವರ ವೈಯಕ್ತಿಕ ಸಮಸ್ಯೆ ಬಗೆಹರಿಸಿ ಕೊಡಲು ಕೇಳಿದರೋ ಎಂಬುದರ ಕುರಿತು ಸಹ ಹೇಳುತ್ತೇನೆ ಎಂದು ಪ್ರಶ್ನೆ ಮಾಡಿದರು. ಒಟ್ಟಿನಲ್ಲಿ ರಾಜಕೀಯದಲ್ಲಿ ಒಬ್ಬರ ಮೇಲೋಬ್ಬರು ಆರೋಪವನ್ನು ಮಾಡುತ್ತಲೇ ಇದ್ದಾರೆ. ಮೈತ್ರಿ ಬೀಳಲು ಕೂಡ ಇದೆ ಕಾರಣ… ಹೌದು ಪಕ್ಷದ ಒಳಗೊಳಗೆ ಸಾಕಷ್ಟು ಜಗಳಗಳು ನಡೆಯುತ್ತಲೆ ಇರುತ್ತವೆ.. ಬಿಜೆಪಿಯ ಒಳಗೆ ಯಾವಾಗ ಅಸಮಾಧಾನಗಳು ಹೊರಹೊಮ್ಮುತ್ತವೋ ಕಾದು ನೋಡಬೇಕಿದೆ..
Comments