'ರಾಜಕೀಯ ನಿವೃತ್ತಿ' ಘೋಷಿಸಿದ ಜೆಡಿಎಸ್ ಅನರ್ಹ ಶಾಸಕ..!!

ದೋಸ್ತಿ ಸರ್ಕಾರ ಪತನವಾಗಲು ಅತೃಪ್ತ ಶಾಸಕರ ರಾಜೀನಾಮೆಯೇ ಕಾರಣ ಎಂಬುದು ಸದ್ಯ ರಾಜಕೀಯ ವಲಯದಲ್ಲಿ ಬಾರೀ ಚರ್ಚೆಯ ವಿಷಯವಾಗಿದೆ.. ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವುದು ಕೂಡ ಚರ್ಚೆಯ ವಿಷಯವಾಗಿದೆ. ಇದೀಗ ಅನರ್ಹ ಶಾಸಕರೊಬ್ಬರು ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಮೂಲಕ ಗೆದ್ದು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು, ನಂತರ ಕೊನೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತರೊಂದಿಗೆ ಸೇರಿ ಅನರ್ಹತೆಯ ಶಿಕ್ಷೆ ಅನುಭವಿಸುತ್ತಿರುವ ಹೆಚ್ ವಿಶ್ವನಾಥ್ ಇದೀಗ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.
ಹೌದು.. ಅತೃಪ್ತ ಶಾಸಕರೊಂದಿಗೆ ಮುಂಬೈ ಸೇರಿಕೊಂಡು ಸರ್ಕಾರ ಬೀಳುವುದಕ್ಕೆ ಇವರು ಕೂಡ ಕಾರಣವಾಗಿದ್ದರು., ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರು ಸಕ್ರೀಯ ರಾಜಕಾರಣಕ್ಕೆ ಇದೀಗ ಗುಡೈ ಬೈ ಹೇಳಿದ್ದಾರೆ. ಈ ಕುರಿತು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ನ ಅನರ್ಹ ಶಾಸಕ ಹೆಚ್ ವಿಶ್ವನಾಥ್, ಇನ್ನೂ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಈ ಮೂಲಕ ರಾಜಕೀಯ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ದೋಸ್ತಿಗಳಿಗೆ ಕೈ ಕೊಟ್ಟ ಮೇಲೆ ಅತೃಪ್ತ ಶಾಸಕರು ಪೇಚಿಗೆ ಸಿಲುಕಿದಂತೆ ಆಗಿದೆ.. ಮುಂದೆ ರಾಜ್ಯ ರಾಜಕೀಯದ ಭವಿಷ್ಯ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ
Comments