ಜೆಡಿಎಸ್ ನ ಬಿಗ್ ಮಾಸ್ಟರ್ ಪ್ಲ್ಯಾನ್..!! ಪ್ರಜ್ವಲ್ ಮತ್ತೆ ಅಖಾಡಕ್ಕೆ..!! ಹಾಸನ ಗೌಡರ ಪಾಲಾಗುತ್ತಾ..?
ದೋಸ್ತಿಗಳಿಗೆ ಕೈ ಕೊಟ್ಟ ಅತೃಪ್ತ ಶಾಸಕರು ಸದ್ಯ ಅನರ್ಹರಾಗಿದ್ದಾರೆ.. ಅದೇ ಪಟ್ಟಿಯಲ್ಲಿ ಹೆಚ್ ವಿಶ್ವನಾಥ್ ಕೂಡ ಇದ್ದಾರೆ. ಅವರು ಕೂಡ ರಾಜೀನಾಮೆಯನ್ನು ನೀಡಿದ್ದರು.. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಹೆಚ್. ವಿಶ್ವನಾಥ್ ಅವರಿಗೆ ಬಿಜೆಪಿ ನಾಯಕರು ಕೈಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಇರಾದೆ ಹೊಂದಿದ್ದ ವಿಶ್ವನಾಥ್ ಅವರ ಲೆಕ್ಕಾಚಾರ ಇದೀಗ ತಲೆಕೆಳಗಾಗುವ ಸಾಧ್ಯತೆಯಿದೆ.
ಹುಣಸೂರು ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಕುರಿತು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದು, ಈ ಕುರಿತು ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.ದೋಸ್ತಿ ಸರ್ಕಾರ ಪತನವಾಗಲೂ ಕಾರಣವಾದ ವಿಶ್ವನಾಥ್ ಅವರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರು, ಪ್ರಜ್ವಲ್ ರೇವಣ್ಣ ಅವರನ್ನು ಹುಣಸೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಗೆದ್ದರೆ ಹಾಸನ ಲೋಕಸಭಾ ಕ್ಷೇತ್ರ ತೆರವಾಗುವುದರಿಂದ ಅಲ್ಲಿಂದ ಹೆಚ್.ಡಿ. ದೇವೇಗೌಡರನ್ನು ಅಖಾಡಕ್ಕಿಳಿಸುವ ಚಿಂತನೆಯನ್ನು ಮಾಡಲಾಗಿದೆ.. ಪ್ರಜ್ವಲ್ ರೇವಣ್ಣ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದರೆ ಅವರಿಗೆ ಸಿ.ಪಿ. ಯೋಗೇಶ್ವರ್ ಪೈಪೋಟಿಯನ್ನು ನೀಡಲಿದ್ದಾರೆ.. ಈ ಬಾರಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಲಿವೆ…
Comments