`ಸಚಿವ ಸಂಪುಟ’ ವಿಸ್ತರಣೆಗೂ ಮುನ್ನ ಬಿಎಸ್ ವೈ , ಅಮಿತ್ ಷಾ ಭೇಟಿ..!! ಕಾರಣ ಏನ್ ಗೊತ್ತಾ..?
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.. ಈ ಹಿಂದೆ ದೋಸ್ತಿ ಸರ್ಕಾರವು ಸರ್ಕಾರ ರಚನೆ ಮಾಡುವ ಸಮಯದಲ್ಲಿಯೇ ಸಾಕಷ್ಟು ಎಡವಿತ್ತು.. ಇದೀಗ ಮತ್ತೆ ಬಿಜೆಪಿ ಗೆ ಅದೇ ತಲೆ ನೋವಿನ ವಿಷಯವಾಗಿ ಬಿಟ್ಟಿದೆ.. ಇದೀಗ ಬಿಜೆಪಿ ಸರ್ಕಾರ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದೆ.. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆಗಸ್ಟ್ 9 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.
ಅಮಿತ್ ಶಾ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿ ಆಗಸ್ಟ್ 9 ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸಂಪುಟ ರಚನೆಗೂ ಮುನ್ನ ಆಗಸ್ಟ್ 7 ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನು ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು ಎನ್ನುವ ಕುರಿತು ಸಿಎಂ ಬಿಎಸ್ ವೈ ಅವರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರು ಈಗಾಗಲೇ ಪಟ್ಟಿ ಸಿದ್ದಪಡಿಸಿದ್ದಾರೆ. ಆ ಪಟ್ಟಿ ಪ್ರಕಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಯುತ್ತಿದೆ.. ಎಲ್ಲರ ಕಣ್ಣು ಕೂಡ ಸಚಿವ ಸ್ಥಾನದ ಮೇಲೆಯೇ ಇದೆ.. ಯಾರಿಗೆ ಯಾವ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ..
Comments